ಬೆಂಗಳೂರು : ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಬಿಜೆಪಿ ಸರ್ಕಾರದ ಜನಸಂಕಲ್ಪ ಸಮಾವೇಶದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ಅದರಲ್ಲೂ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿಯವರು ನಿಮಗೆ ದಮ್ ಇದ್ರೆ ನಿಮಗೆ ತಾಕತ್ ಇದ್ರೆ ಬಿಜೆಪಿಯ ಯಾತ್ರೆಯನ್ನು ತಡೆಯಿರಿ ಅಂತ ಹೇಳಿರುವುದನ್ನೇ ಗುರಿಯಾಗಿಸಿಕೊಂಡು ಟ್ವೀಟಿಸಿರುವ ಸಿದ್ದರಾಮಯ್ಯ ಜನಮರ್ದನ ಸರ್ಕಾರ ಎಂಬ ಟೈಟಲ್ ಅಡಿ. ದಮ್ ಅಂದ್ರೆ ಧಮ್ ಬಿರಿಯಾನಿ ಅಂತ ನೀವು ತಿಳ್ಳಂಡಂಗಿದೆ ಬೊಮ್ಮಾಯಿಯವರೇ. ದಮ್ ಇದ್ರೆ ಬಿಜೆಪಿ ಯಾತ್ರೆ ಹಿಮ್ಮೆಟ್ಟಿಸಿ ಅಂತ ಸವಾಲು ಹಾಕಿದ್ದೀರಿ ನಾನ್ಯಾಕೆ ಹಿಮ್ಮೆಟ್ಟಿಸಲು ಹೋಗಲಿ ಸಮಾವೇಶದಲ್ಲಿ ಖಾಲಿ ಖುರ್ಚಿಗಳನ್ನು ನೋಡಿದ್ರೆ ನಿಮ್ಮ ಜಾತ್ರೆ ಯನ್ನು ಜನರೇ ಹಿಮ್ಮೆಟ್ಟಿಸಿದ್ದಾರೆ ಎಂದು ನಿಮಗೆ ಅನಿಸಲ್ವಾ ಎಂದು ಟಾಂಗ್ ನೀಡಿದ್ದಾರೆ.
ಪದೇ ಪದೇ ನನ್ನ ಅಧಿಕಾರಾವಧಿಯ ಹಗರಣಗಳನ್ನು ಬಯಲಿಗೆಳೆಯುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಬಂದಿದ್ದಾರೆ ದಮ್ ಇದ್ರೆ ಮೊದಲು ಆ ಕೆಲಸ ಮಾಡಿ ನಾನು ಅದನ್ನು ಎದುರಿಸಲು ಸಿದ್ಧ ಎಂದಿದ್ದಾರೆ.
PublicNext
11/09/2022 04:34 pm