ಬೆಂಗಳೂರು: ಸೆ.26 ರಿಂದ ಆರಂಭವಾಗುವ ಮೈಸೂರು ದಸರಾವನ್ನು ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಿನ್ನೆ ಗಾಂಧಿ ಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ, ವಿಶ್ವ ಪ್ರಸಿದ್ಧ ಮೈಸೂರು ದಸರಾ ಸೋಮವಾರದಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಯಾರನ್ನು ಆಹ್ವಾನಿಸುವುದು ಎಂಬ ಕುರಿತು ಸಭೆ ನಡೆಸಲಾಗಿದೆ.
ಈ ಸಭೆಯ ಬಳಿಕ ರಾಷ್ಟ್ರಪತಿ ಅವರಿಗೆ ಪತ್ರ ಬರೆಯಲಾಯಿತು. ಈ ಪತ್ರಕ್ಕೆ ಇಂದು ಸಮ್ಮತಿ ಪತ್ರ ಬಂದಿದೆ. ಆದ್ದರಿಂದ ಈ ಬಾರಿಯ ದಸರಾಕ್ಕೆ ರಾಷ್ಟದ ಪ್ರಥಮ ಪ್ರಜೆ ಚಾಲನೆ ನೀಡಲಿದ್ದಾರೆ ಎಂದರು.
PublicNext
11/09/2022 08:22 am