ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂ.ಗ್ರಾಮಾಂತರ: ಬಯಲುಸೀಮೆ ನೆಲದ ಬಗ್ಗೆ ಕನ್ನಡದಲ್ಲೇ ನಮನ: ಸ್ಮೃತಿ ಇರಾನಿ ಪ್ರಾರ್ಥನೆಗೆ ಮುಗಿಲುಮುಟ್ಟಿದ ಕರತಾಡನ

ದೊಡ್ಡಬಳ್ಳಾಪುರ: ಜನಸ್ಪಂದನ ಸಮಾವೇಶದಲ್ಲಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಯಲು ಸೀಮೆಯ ಇತಿಹಾಸ, ಶ್ರೇಷ್ಠ ನಾಯಕರನ್ನು ಸ್ಮರಿಸಿ, ಅವರಿಗೆ ಜನ್ಮ ನೀಡಿದ ನೆಲದ ಬಗ್ಗೆ ಪ್ರಾರ್ಥಿಸಿ ಲಕ್ಷ ಲಕ್ಷ ಜನರ ಚಪ್ಪಾಳೆ ಗಿಟ್ಟಿಸಿದರು. ಸ್ಮೃತಿ ಇರಾನಿಯವರ ಕನ್ನಡ ಕೇಳಿ ಜನರ ಕರತಾಡನ ಮುಗಿಲು ಮುಟ್ಟಿತ್ತು.

ಬಯಲುಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ & ತುಮಕೂರು ಜಿಲ್ಲೆಗಳಿಗೆ ಸಂಬಂಧಿಸಿದ ಕಾರ್ಯಕ್ರಮ ಇದಾಗಿದ್ದರಿಂದ ನಾಲ್ಕು ಜಿಲ್ಲೆಯ ಇತಿಹಾಸದ ಪುಣ್ಯ ಪುರುಷರನ್ನು ಸ್ಮೃತಿ ಇರಾನಿ ಕನ್ನಡದಲ್ಲೇ ಸ್ಮರಿಸಿ ನಮಿಸಿದರು.

ದೊಡ್ಡಬಳ್ಳಾಪುರ ಘಾಟಿ ಸುಬ್ರಮಣ್ಯ ಸ್ವಾಮಿ, ಚಿಕ್ಕಬಳ್ಳಾಪುರ ನಂದಿಯ ಭೋಗನಂದೀಶ್ವರ, Sir.M.ವಿಶ್ವೇಶ್ವರಯ್ಯ, CNR.ರಾವ್, ಮಾಲೂರಿನ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕೋಲಾರಮ್ಮ ದೇವರಿಗೆ ನಮಿಸಿದರು. ಮಂಕುತಿಮ್ಮನಕಗ್ಗ ಕಾವ್ಯ ರಚನೆಯ ಡಿವಿಜಿ ಮೊದಲಾದ ಮಹಾಪುರುಷರಿಗೆ ಜನ್ಮ ನೀಡಿದ ನಾಡಿಗೆ ನಮಿಸಿ ಪ್ರಾರ್ಥಿಸುತ್ತೇನೆ ಎಂದಾಗ ಒಂದೇ ಸಲ ಲಕ್ಷ ಲಕ್ಷ ಜನರ ಕರತಾಡನ ಮುಗಿಲು ಮುಟ್ಟಿತ್ತು.

-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೊಡ್ಡಬಳ್ಳಾಪುರ..

Edited By : Shivu K
PublicNext

PublicNext

10/09/2022 10:29 pm

Cinque Terre

52.93 K

Cinque Terre

0

ಸಂಬಂಧಿತ ಸುದ್ದಿ