ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಕೀಯ ನಾಯಕರ ಶರ್ಟು, ಬೆಲ್ಟು ರೇಟು ಚೆಕ್ ಮಾಡೋದ್ರಲ್ಲಿ ಬ್ಯುಸಿಯಾದ ಕಾರ್ಯಕರ್ತರು

ಬೆಂಗಳೂರು: ಇಷ್ಟು ದಿನ ಕಾಂಗ್ರೆಸ್ ಕಾರ್ಯಕರ್ತರು ಮೋದಿ ಹತ್ತು ಲಕ್ಷ ಸೂಟ್ ಹಾಕ್ತಾರೆ. ಅವ್ರು ತಿನ್ನೋ ಅಣಬೆ ಕೆಜಿಗೆ ನಲವತ್ತು ಸಾವಿರ ಅಂತೆಲ್ಲ ಚರ್ಚೆ ಮಾಡಿ ವೈರಲ್ ಮಾಡ್ತಿದ್ರು. ಇಂದು ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಟೀ ಶರ್ಟ್ ಬೆಲೆ ಎಷ್ಟು ಅಂತ ಕೆದಕಿದ್ದಾರೆ. ಭಾರತ್ ಜೋಡೋ ಕಾರ್ಯಕ್ರಮ ಹಿನ್ನೆಲೆ ರಾಹುಲ್ ಧರಿಸಿದ್ದ ಟೀ ಶರ್ಟ್ ನಲವತ್ತು ಸಾವಿರಕ್ಕೂ ಅಧಿಕ ಅನ್ನೋದನ್ನ ಪತ್ತೆ ಮಾಡಿ ಭಾರತ್ ದೇಖೋ ಅಂತ ಟ್ರೋಲ್ ಮಾಡ್ತಿದ್ದಾರೆ.‌

ಇಷ್ಟೇ ಆಗಿದ್ರೆ ಪರವಾಗಿಲ್ಲ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನವರು ಬಿಎಸ್‌ವೈ ಪುತ್ರ ವಿಜಯೇಂದ್ರ ಹಾಕಿರೋ ಬೆಲ್ಟ್ ಬೆಲೆಯನ್ನ ಗೂಗಲ್‌ನಲ್ಲಿ ಸರ್ಚ್ ಮಾಡಿ ವಿಜಯೇಂದ್ರ ಅರವತ್ತರ ಮೂರು ಸಾವಿರದ ಬೆಲ್ಟ್ ಹಾಕಿದ್ದಾರೆ ಅಂತ ಪ್ರಚಾರ ಮಾಡ್ತಿದ್ದಾರೆ.

ಒಟ್ಟಿನಲ್ಲಿ ದೇಶದ ಜಿಡಿಪಿ, ರೈತರ ಕಷ್ಟ, ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡಬೇಕಾದ ಜನಪ್ರತಿನಿಧಿಗಳು, ಕಾರ್ಯಕರ್ತರು ನಾಯಕರು ಬಳಸುವ ಬಟ್ಟೆ ಬರೆ ಬಗ್ಗೆ ಚರ್ಚೆ ಮಾಡ್ತಿರೋದು ವಿರ್ಯಾಸವೇ ಸರಿ.

Edited By : Nagaraj Tulugeri
PublicNext

PublicNext

10/09/2022 11:59 am

Cinque Terre

11.24 K

Cinque Terre

0

ಸಂಬಂಧಿತ ಸುದ್ದಿ