ಬೆಂಗಳೂರು: ವಿಪಕ್ಷನಾಯಕ ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ಸ್ ಹೊಡೆದಿದ್ದು, ಬೆಂಗಳೂರಿನ ಮಳೆ ಹಾನಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಬೋಟ್ನಲ್ಲಿ ಸಿದ್ದರಾಮಯ್ಯ ಬೆಂಗಳೂರು ವೀಕ್ಷಿಸಿದ್ದಾರೆ. ಯಮಲೂರು ಎಪ್ಸಿಲಾನ್ ಲೇಔಟ್ನಿಂದ ರೌಂಡ್ ಶುರು ಮಾಡಿದ ಸಿದ್ದರಾಮಯ್ಯ ಬೋಟ್ನಲ್ಲಿ ಕುಳಿತು ಮಳೆ ಹಾನಿ ಪ್ರದೇಶ ವೀಕ್ಷಣೆ ಮಾಡಿದ್ರು. ಎಷ್ಟು ಮನೆಗಳಿಗೆ ನೀರು ನುಗ್ಗಿದೆ ಮತ್ತು ಯಾವ ಯಾವ ಏರಿಯಾಗಳು ಮಳೆಯ ಹೊಡೆತಕ್ಕೆ ಸಿಲುಕಿದೆ ಎಂದು ಮಾಹಿತಿ ಪಡೆದ್ರು. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ರಾಮಲಿಂಗಾರೆಡ್ಡಿ ಮತ್ತಿತರರು ಸಾಥ್ ಕೊಟ್ಟಿದ್ದು, ಬೆಳ್ಳಂದೂರು ರಿಂಗ್ ರಸ್ತೆಯ ಎಕೋ ಸ್ಪೇಸ್ಗೆ ಸಿದ್ದು ಭೇಟಿ ನೀಡಿ ಪರಿಶೀಲನೆ ಮಾಡಿದರು.
ORR ರಿಂಗ್ ರಸ್ತೆಯ ಸ್ಕೈವಾಕ್ ಬಳಿ ಪರಿಶೀಲನೆ ಮಾಡಿದ ಸಿದ್ದು ನಂತರ ಸರ್ಜಾಪುರ ರಸ್ತೆಯ ರೈನ್ಬೋ ಡ್ರೈವ್ ಲೇಔಟ್ ಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ರು. ರೈನ್ ಬೋ ಡ್ರೈವ್ ಲೇಔಟ್ ನಿವಾಸಿಗಳ ಜೊತೆ ಮಾತನಾಡಿ ನಿವಾಸಿಗಳ ದೂರನ್ನು ಆಲಿಸಿದ್ರು. ನಂತರ ಅಲ್ಲಿಂದ ಬಳಗೆರೆ ದಿಶಾ ಅಪಾರ್ಟ್ ಮೆಂಟ್ ಸ್ಥಳ ಪರಿಶೀಲನೆ ಮಾಡಿದ್ರು.ನಂತರ ಮನೆಗಳಿಗೆ ನೀರು ನುಗ್ಗಿದ್ದ ಮುನ್ನೇಕೊಳಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಹಾಗೇ ವಿದ್ಯುತ್ ಶಾಕ್ಗೆ ಬಲಿಯಾದ ಸಿದ್ದಾಪುರದ ಅಖಿಲಾ ಮನೆಗೂ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ನಂತರ ವರ್ತೂರು ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿದ್ದರಾಮಯ್ಯ ಪರಿಶೀಲನೆ ನಡೆಸಿದ್ರು.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
08/09/2022 06:31 pm