ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಜನೋತ್ಸವ ಮುಂದಿನ ಚುನಾವಣೆಯ ದಿಕ್ಸೂಚಿ: ನಳಿನ್‍ಕುಮಾರ್ ಕಟೀಲ್

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ಜನೋತ್ಸವ ನಡೆಯಲಿದೆ. ಅದು ಮುಂದಿನ ಚುನಾವಣೆಯ ದಿಕ್ಸೂಚಿ ಎನಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.ದೊಡ್ಡಬಳ್ಳಾಪುರದಲ್ಲಿ ನಡೆಯುವ ಬೃಹತ್ ರ್ಯಾಲಿ ಅಂಗವಾಗಿ ಇಂದು ನಡೆದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರ ಮೂರು ವರ್ಷಗಳ ಅಧಿಕಾರಾವಧಿ ಪೂರೈಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಒಂದು ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ನಡೆಯುವ ಸಮಾವೇಶದಲ್ಲಿ ಸಂದೇಶ ನೀಡಲು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬರಲಿದ್ದಾರೆ.ಕೋಲಾರ, ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದ ಎಲ್ಲ ಕಾರ್ಯಕರ್ತರಿಗೆ ಇದೊಂದು ಸಂತಸದ ವಿಚಾರವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಣ್ಣ ‘ಜನ ಸೇರಿಸಿ’ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅದೊಂದು ಸವಾಲಿನ ನಡುವೆ ಜನೋತ್ಸವ ನಡೆಯಲಿದೆ. ಅದು ಸಿದ್ದರಾಮಣ್ಣನ ಉತ್ಸವವಾದರೆ ಇದು ಜನರ ಪ್ರೇರಣೆಯಿಂದ ನಡೆಯುವ ಉತ್ಸವ ಎಂದು ವಿಶ್ಲೇಷಿಸಿದರು. ಇಲ್ಲಿನ ಜನೋತ್ಸವದಿಂದ ಪ್ರಾರಂಭಿಸಿ 7 ಕಾರ್ಯಕ್ರಮ ನಡೆಸಲು ತೀರ್ಮಾನ ಮಾಡಲಾಗಿದೆ. ಸೆ.2ರಂದು ಪ್ರಧಾನಿಯವರ ಕಾರ್ಯಕ್ರಮವಿತ್ತು. ಅದು ಅಭೂತಪೂರ್ವವಾಗಿ ಯಶಸ್ವಿಯಾಗಿ ನಡೆದಿದೆ.

ಕರ್ನಾಟಕ ಉಳಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ:

ಕರ್ನಾಟಕವನ್ನು ಉಳಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಭಾವನೆ ಜನರಲ್ಲಿದೆ. ರಾಜ್ಯ ಮತ್ತು ದೇಶಕ್ಕೆ ಏಕೈಕ ನಾಯಕರು ನರೇಂದ್ರ ಮೋದಿ ಎಂಬ ಭಾವನೆ ಜನರದು. ರಾಜ್ಯದ ಜನರನ್ನು ಮುಟ್ಟುವ ಕಾರ್ಯವನ್ನು ನಮ್ಮ ಕಾರ್ಯಕರ್ತರು ಮಾಡಬೇಕಿದೆ ಎಂದು ತಿಳಿಸಿದರು. ಮಂಗಳೂರಿನವರನ್ನು ಸೋಲಿಸಲು 4 ಲಕ್ಷ ಜನರನ್ನು ಸೇರಿಸಿ ಇಲ್ಲಿ ದೊಡ್ಡ ರ್ಯಾಲಿ ಆಯೋಜಿಸಿ ಎಂದು ಸವಾಲೆಸೆದರು.

ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150 ಸ್ಥಾನ:

ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150 ಸ್ಥಾನ ನಮ್ಮದಾಗಲಿದೆ ಎಂದು ಎದೆತಟ್ಟಿ ಹೇಳುವುದಾಗಿ ಚಪ್ಪಾಳೆಗಳ ನಡುವೆ ತಿಳಿಸಿದರು. ಜನೋತ್ಸವಕ್ಕೆ ಜನರು ಬರುವ ವಿಶ್ವಾಸ ನಿಮ್ಮದಿರಲಿ ಎಂದು ಅವರು ನಗುತ್ತಲೇ ಸವಾಲು ಎಸೆದರು. ಕಾರ್ಯಕರ್ತರನ್ನು ಸೇರಿಸಲು ಜೋಶ್ ಇರಬೇಕು. ಇಲ್ಲವಾದರೆ ಅದು ಸಿದ್ದರಾಮಣ್ಣನ ಕಾರ್ಯಕ್ರಮವಾಗುತ್ತದೆ. ಸಿದ್ದರಾಮಣ್ಣನ ಕಾರ್ಯಕ್ರಮ ಅವ್ಯವಸ್ಥೆಯ ಭಾಗವಾಗಿತ್ತು ಎಂದು ಟೀಕಿಸಿದರು.

Edited By : Nirmala Aralikatti
Kshetra Samachara

Kshetra Samachara

04/09/2022 01:42 pm

Cinque Terre

1.48 K

Cinque Terre

0

ಸಂಬಂಧಿತ ಸುದ್ದಿ