ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಜೆಪಿಗೆ ಸರ್ಕಾರ ನಡೆಸುವ ಅರ್ಹತೆ ಇಲ್ಲಾ : ಲಿಂಬಾವಳಿ ವಿರುದ್ದ ಡಿಕೆಶಿ ಗರಂ

ಬೆಂಗಳೂರು : ಔಟರ್ ರಿಂಗ್ ರೋಡ್ ನವರು ಮಳೆಯಿಂದ ಆ ಕ್ಷೇತ್ರದಲ್ಲಿ ಏನಾಗಿದೆ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಅವರಿಗೆ ಎಷ್ಟು ಕೋಟಿ ನಷ್ಟ ಆಗಿದೆ ಅಂತ ಹೇಳಿದ್ದಾರೆ.ಅವರಿಗೆ ಬಾಯಿ ಇತ್ತು,ಶಕ್ತಿಯೂ ಇತ್ತು ಪತ್ರ ಬರೆದಿದ್ದಾರೆ.ಆದರೆ ಶಕ್ತಿ ಇಲ್ಲದ ಮಹಿಳೆಯರು ಶಾಸಕರಿಗೆ ಸಮಸ್ಯೆ ಹೇಳುವುದು ಸಾಮಾನ್ಯ ಎಂದು ಅರವಿಂದ್ ಲಿಂಬಾವಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಸಾಮಾಧಾನ ಹೊರ ಹಾಕಿದ್ದಾರೆ.

ಶಾಸಕರಿಗೆ ಜನರ ಸಮಸ್ಯೆ ಕೇಳುವಷ್ಟು ವ್ಯವದಾನ ಇಲ್ಲವಾಯಿತೆ ಶಾಂತಿ ಸಹನೆ ಇಲ್ಲ ಎಂದರೆ ಅವರು ಆ ಕ್ಷೇತ್ರದ ಶಾಸಕರಾಗಿ ಇರುವುದಕ್ಕೆ ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ.

ಅಷ್ಟೇ ಅಲ್ಲದೆ ಲಿಂಬಾವಳಿ ಮಾತ್ರವಲ್ಲದೆ ಇಡೀ ಬಿಜೆಪಿ ಸರ್ಕಾರಕ್ಕೆ ಆಡಳಿತ ನಡೆಸುವ ಅರ್ಹತೆ ಇಲ್ಲಾ ಇದು ಒಟ್ಟು ಸರ್ಕಾರದ ವೈಫಲ್ಯ. ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡುತ್ತಿದೆ. ಖಂಡಿತ ಬ್ರ್ಯಾಂಡೂ ಇಲ್ಲ ಏನೂ ಇಲ್ಲ.ಸಿದ್ದರಾಮಯ್ಯ ಕಾಲದವರೆಗೆ ಬೆಂಗಳೂರನ್ನ ಬ್ರ್ಯಾಂಡ್ ಆಗಿ ಉಳಿಸಿದ್ವಿ ಈಗ ಎಲ್ಲವೂ ಗೋವಿಂದ ಗೋವಿಂದ ಎಂದು ಡಿಕೆಶಿ ಅರವಿಂದ್ ಲಿಂಬಾವಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Edited By : Nagesh Gaonkar
PublicNext

PublicNext

03/09/2022 03:25 pm

Cinque Terre

24.03 K

Cinque Terre

0

ಸಂಬಂಧಿತ ಸುದ್ದಿ