ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟಾರ್ಪಲ್ ಹಂಚಿಕೆ ವಿಚಾರ; ಕಾಂಗ್ರೆಸ್- ಬಿಜೆಪಿ ವಾಕ್ಸಮರ

ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಂದಿನಿ‌ ಲೇ ಔಟ್ ನ ಲಕ್ಷ್ಮಿದೇವಿ ನಗರದಲ್ಲಿ ಘಟನೆ ನಡೆದಿದೆ.

ಇಂದು ಲಕ್ಷ್ಮಿದೇವಿ ನಗರದಲ್ಲಿ ಶೆಡ್ ನಲ್ಲಿ ವಾಸಿಸುವ ಜನರಿಗೆ ಕಾಂಗ್ರೆಸ್ ಕಾರ್ಯಕರ್ತೆ ಕುಸುಮಾ, ಬೆಳಗ್ಗೆ10.30ಕ್ಕೆ ಟಾರ್ಪಲ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಟಾರ್ಪಲ್ ಹಂಚುವ ಸಂದರ್ಭ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿಯೇ ನಡೆದು ಹೋಯಿತು.

ಜನರಿಗೆ ಟಾರ್ಪಲ್ ಹಂಚಲು ವಿರೋಧ ವ್ಯಕ್ತಪಡಿಸಿದ ಸ್ಥಳೀಯ ಬಿಜೆಪಿ ಮುಖಂಡ ವೇಲು ನಾಯ್ಕರ್ ಹಾಗೂ ಬೆಂಬಲಿಗರು ಕಾಂಗ್ರೆಸ್ ಮುಖಂಡರಿಗೆ ತಡೆಯೊಡ್ಡಿ ಹಲ್ಲೆಗೆ ಮುಂದಾಗಿದ್ರು ಎಂದು ದೂರು ನೀಡಿದ್ದಾರೆ. ಇಲ್ಲಿ ಎಲ್ಲಾ ವ್ಯವಸ್ಥೆಯನ್ನು ಜನರಿಗೆ ಮಾಡಿದ್ದೇವೆ ಈಗ ಏಕೆ ಬಂದಿದ್ದೀರಿ? ಎಂದು ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿದೆ.

Edited By :
PublicNext

PublicNext

21/08/2022 09:40 pm

Cinque Terre

34.22 K

Cinque Terre

1

ಸಂಬಂಧಿತ ಸುದ್ದಿ