ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹಿಂದೂ ಕಾರ್ಯಕರ್ತರ ಹತ್ಯೆಯ ಮೂಲದ ಹುಡುಕಾಟ ಸರ್ಕಾರ ಮಾಡ್ತಿದೆ; SR.ವಿಶ್ವನಾಥ್

ಯಲಹಂಕ: ಇತ್ತೀಚ್ಚೆಗೆ ಹಿಂದುತ್ವಾದಿಗಳ ಹತ್ಯೆಗಳಾಗ್ತಿವೆ. ಇದರ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ಸ್ವಲ್ಪ ಅಸಮಾಧಾನ ಇದೆ. ಆದರೆ ಬಿಜೆಪಿ ಸರ್ಕಾರ ಹತ್ಯೆಗಳ ಮೂಲದ ಹುಡುಕಾಟ ನಡೆಸುತ್ತಿದೆ. ಪ್ರವೀಣ್ ಹತ್ಯೆ ಕೇಸ್ನ್ನು NIAಗೆ ವಹಿಸಿರುವುದೇ ಇದಕ್ಕೆ ಸಾಕ್ಷಿ. ಈಗಾಗಲೇ ಸಿಮಿಯಂತಹ ಉಗ್ರ ಸಂಘಟನೆ ನಿರ್ನಾಮ ಮಾಡಲಾಗಿದೆ. JKLF ಬ್ಯಾನ್ ಮಾಡಿದ್ದೇವೆ. ಹಾಗೆಯೇ ಸೂಕ್ತ ದಾಖಲೆ ಸಾಕ್ಷ್ಯ ಲಭಿಸಿದರೆ PFI, SDPI ಮೊದಲಾದ ದೇಶ ವಿರೋಧಿ ಸಂಘಟನೆಗಳನ್ನು ನಿಷೇಧಿಸಲಾಗುವುದು.

ಬಹುಸಂಖ್ಯಾತ ಹಿಂದೂಗಳು ತಿರುಗಿಬಿದ್ದರೆ ಏನಾಗುತ್ತೆ ಅನ್ನೋದನ್ನ ತಿಳಿದು ಬದುಕಬೇಕಾಗ್ತದೆ. ಜಮ್ಮುಕಾಶ್ಮೀರದಲ್ಲಿ ಆರ್ಟಿಕಲ್ 376ನ ಬ್ಯಾನ್ ಮಾಡಿದವರಿಗೆ ಉಳಿದ ದೇಶ ವಿರೋಧಿಗಳು ಯಾವ ಲೆಕ್ಕ. ಸೂಕ್ತ ಸಾಕ್ಷ್ಯಕ್ಕಾಗಿ ಕಾಯ್ತಿದ್ದೇವೆ. ಸಮಯ ಬಂದರೆ ಎಲ್ಲವೂ ಸಾಧ್ಯ ಎಂದು ಪರೋಕ್ಷಾವಾಗಿ ವಿರೋಧಿಗಳಿಗೆ BDA ಅಧ್ಯಕ್ಷ ಸಖತ್ತಾಗೆ ಟಾಂಗ್ ನೀಡಿದರು. ಯಲಹಂಕ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಲ್ಲಿ ನೈತಿಕತೆ ಸಾರುವ ಪುಸ್ತಕ ವಿತರಣೆ ಮುಗಿಸಿ ವಿಶ್ವನಾಥ್ ಪಬ್ಲಿಕ್ ನೆಕ್ಸ್ಟ್‌ಗೆ ಉತ್ತರಿಸಿದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.

Edited By : Nagesh Gaonkar
PublicNext

PublicNext

16/08/2022 10:48 pm

Cinque Terre

45.33 K

Cinque Terre

1

ಸಂಬಂಧಿತ ಸುದ್ದಿ