ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನುದಾನ ತಗೊಂಡು ಇಲ್ಲ ಅಂತಿದ್ದಾರೆ ನಾಚಿಕೆ ಆಗಬೇಕು: ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ತಿರುಗೇಟು..!!

ಬೆಂಗಳೂರು: ರಾಜ್ಯ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡ್ತಿದೆ ಸರಿಯಾಗಿ ಅನುದಾನ ನೀಡುತ್ತಿಲ್ಲ ಆನೇಕಲ್ ಶಾಸಕ ಶಿವಣ್ಣ ಹೇಳಿಕೆಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ಯಾವುದೇ ಕಾರಣಕ್ಕೂ ತಾರತಮ್ಯ ಮಾಡಿಲ್ಲ. ಕೇಳಿದವರಿಗೆಲ್ಲ ದುಡ್ಡು ಕೊಟ್ಟಿದ್ದಾರೆ ಯಡಿಯೂರಪ್ಪನವರು ಕೇಳಿದವರಿಗೆಲ್ಲ ಹಣ ಕೊಟ್ಟಿದ್ದಾರೆ. ಬೊಮ್ಮಯ್ಯ ಅವರು ಅವರ ಬಳಿ ಅಭಿವೃದ್ಧಿಗೆ ಹಣ ತೆಗೆದುಕೊಂಡು ತಾರತಮ್ಯ ಮಾಡುತ್ತಿದ್ದಾರೆ ಅಂತ ಹೇಳಬೇಕಾದರೆ ನಿಮಗೆ ನಾಚಿಕೆ ಆಗಬೇಕು ಎಂದು ಶಾಸಕ ಶಿವಣ್ಣ ವಿರುದ್ಧ ಹರಿಹಾಯ್ದಿದ್ದಾರೆ.

ಸರ್ಜಾಪುರ ರಾಜಗೋಪಾಲ್ ಕಲ್ಯಾಣ ಮಂಟಪದಲ್ಲಿ ಮಾದಿಗ ಮಹಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ ಅಂತ ಹೇಳ್ತಿದ್ದಾರಲ್ಲ, ಒಂದ್ಸರಿ ಅಕೌಂಟ್ಸ್ ಕೊಡಲಿ. ಒಂದೊಂದು ರಸ್ತೆಗೆ ಎರಡೆರಡು ಬಾರಿ ಬಿಲ್ ಮಾಡಿಕೊಂಡಿದ್ದಾರೆ. ಜೊತೆಗೆ ಅನುದಾನದ ದಾಖಲೆ ಸಹ ಇದೆ. ಈ ಬಗ್ಗೆ ನಾನು ಕೂಡ ಖುದ್ದಾಗಿ ಪತ್ರ ಬರೆದಿದ್ದೇನೆ. ತನಿಖೆ ನಡೆದಿದೆ ಎಂದು ಹರಿಹಾಯ್ದಿದ್ದಾರೆ.

Edited By : Nagesh Gaonkar
PublicNext

PublicNext

10/08/2022 08:59 am

Cinque Terre

27.52 K

Cinque Terre

0

ಸಂಬಂಧಿತ ಸುದ್ದಿ