ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆಗೆ ಮುಹೂರ್ತ ಹತ್ತಿರವಾಗುತ್ತಿರುವಂತೆಯೇ ಬೆಂಗಳೂರಿನ ಇನ್ನೂರಾ ನಲವತ್ಮೂರು ವಾರ್ಡುಗಳಲ್ಲೂ ಎಲೆಕ್ಷನ್ ಹವಾ ಜೋರಾಗಿ ಬೀಸತೊಡಗಿದೆ..
ಹಳೆಯ 198 ವಾಡ್೯ಗಳಲ್ಲಿ ಈ ಹಿಂದೆ ಇದ್ದ ಕಾರ್ಪೋರೇಟರ್ ಗಳು ಪುನಃ ಚುನಾವಣೆಗೆ ಸ್ಪರ್ಧಿಸಲು, ಟಿಕೆಟ್ ಗಿಟ್ಟಿಸಲು ಎಲ್ಲಾ ರೀತಿಯ ಸರ್ಕಸ್ಸುಗಳನ್ನೂ ನಡೆಸುತ್ತಿದ್ದರೆ ಈ ಕಡೆ ಹೊಸ ಆಕಾಂಕ್ಷಿಗಳು ತಮ್ಮ ತಮ್ಮ ನಾಯಕರುಗಳ ಕೃಪಾಕಟಾಕ್ಷಕ್ಕೆ ಕಾದು ಕುಳಿತಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳೂ ಕೆಂಪೇಗೌಡರ ಬೆಂಗಳೂರನ್ನು ಆಳಲು ಭರ್ಜರಿ ಪೂರ್ವತಯಾರಿಯಲ್ಲಿ ತೊಡಗಿವೆ..
ಈ ಸಂದರ್ಭದಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಬೆಂಗಳೂರಿನ ವಿವಿಧ ವಾಡ್೯ಗಳಲ್ಲಿ ವಾತಾವರಣ ಹೇಗಿದೆ ? ಬಿಬಿಎಂಪಿ ಚುನಾವಣೆಯ ಬಗ್ಗೆ ಜನರು ಏನಂತಾರೆ ಎಂಬುದರ ಕುರಿತು ಅಭಿಪ್ರಾಯ ಸಂಗ್ರಹಕ್ಕೆ ತೊಡಗಿದಾಗ ವ್ಯಕ್ತವಾದ ಮುಕ್ತ ಭಾವನೆಗಳ ವರದಿ ಇಲ್ಲಿದೆ..
ವರದಿ-- ಪ್ರವೀಣ್ ರಾವ್
PublicNext
28/07/2022 05:28 pm