ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಹಾನಿ ಪರಿಹಾರಕ್ಕೆ ಆಗ್ರಹ, ಜಿಎಸ್ಟಿಗೆ ವಿರೋಧ: ಕೇಂದ್ರ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಧರಣಿ

ಬೆಂಗಳೂರು: ವಿನೂತನ ಚಳುವಳಿಯ ನಾಯಕ ವಾಟಾಳ್ ನಾಗಾರಜ್ ಇಂದು ಬೀದಿಗಿಳಿದು ಸರ್ಕಾರದ ವಿರುದ್ಧ ಧರಣಿ ನಡೆಸಿದ್ದಾರೆ. ಮಳೆ ಹಾನಿ ಪರಿಹಾರಕ್ಕಾಗಿ ಹಾಗೂ ಜಿಎಸ್ಟಿ ವಿರೋಧಿಸಿ ಮೈಸೂರು ಬ್ಯಾಂಕ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪರಿಹಾರ ನೀಡಬೇಕಾದ ಮಂತ್ರಿಗಳು ಫೈವ್ ಸ್ಟಾರ್ ಹೋಟೆಲ್ ಗಳಲ್ಲಿದ್ದಾರೆ. ಅಲ್ಲೊಬ್ಬ ಇಲ್ಲೊಬ್ಬ ಶಾಸಕರು ಕಾಣಿಸಿಕೊಳ್ತಿದ್ದಾರೆ. ಮುಂದಿನ ದಿನಗಳಲ್ಲಿ ಯೂರಿನ್ ಪಾಸ್ ಮಾಡಲು ಸರ್ಕಾರ ಜಿಎಸ್ಟಿ ಹಾಕುತ್ತೆ. ಜ‌ನ ಸಾಮಾನ್ಯರು ಜೀವನ ನಡೆಸುವುದು ಹೇಗೆ ಹೀಗೆ ಆದ್ರೆ ಎಂದರು.

ಹಾಗೇ ಮಳೆಯಿಂದ ಆಗಿರೋ ಅನಾಹುತಗಳಿಗೆ ಪರಿಹಾರ ಘೋಷಣೆ ಮಾಡಬೇಕು.ಸತ್ತವರಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ರು. ಜೊತೆಗೆ ಆಹಾರ ಪದಾರ್ಥಗಳ ಮೇಲೆ ಹಾಕಿರೋ ಜಿಎಸ್ಟಿ ವಾಪಸ್ ಪಡೆಯಲಿಲ್ಲ ಅಂದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ವಾಟಾಳ್ ನಾಗರಾಜ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಗೀತಾಂಜಲಿ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By : Manjunath H D
PublicNext

PublicNext

18/07/2022 04:06 pm

Cinque Terre

26.23 K

Cinque Terre

0

ಸಂಬಂಧಿತ ಸುದ್ದಿ