ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: 9 ವರ್ಷಗಳಿಂದ ನಡೆಯದ ಚುನಾವಣೆ: ವಕ್ಫ್ ಬೋರ್ಡ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಕ್ಫ್ ಬೋರ್ಡ್ ಗೆ 9 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಚುನಾಯಿತ ಪ್ರತಿನಿಧಿಗಳಿಲ್ಲದೆ ವಕ್ಫ್ ಬೋರ್ಡ್ ನ 1 ಕೋಟಿಗೂ ಹೆಚ್ಚು ಆದಾಯ ದುರುಪಯೋಗವಾಗುತ್ತಿದೆ. ಇದರಿಂದ ಬೇಸತ್ತ ಮುಸ್ಲಿಂ ಬಾಂಧವರು ವಕ್ಫ್ ಬೋರ್ಡ್ ಕಚೇರಿಗೆ ಬೀಗ ಜಡಿದು ಚುನಾವಣೆ ನಡೆಸುವಂತೆ ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ ವಕ್ಫ್ ಬೋರ್ಡ್ ಅಧೀನದಲ್ಲಿರುವ 34 ಆಸ್ತಿಯಿಂದ ಬರುವ ಆದಾಯವನ್ನ ಸಮುದಾಯದವರಿಗೆ ಬಳಕೆ ಮಾಡಲಾಗುತ್ತದೆ. ಆದರೆ 2014 ರಿಂದ ವಕ್ಫ್ ಬೋರ್ಡ್ ಗೆ ಚುನಾವಣೆ ನಡೆಯದೆ ಬರುವ ಆದಾಯ ನಿಂತು ಹೋಗಿದೆ. 1 ಕೋಟಿ 20 ಲಕ್ಷಕ್ಕೂ ಹೆಚ್ಚು ಹಣ ವಕ್ಫ್ ಬೋರ್ಡ್ ಗೆ ಬಂದಿಲ್ಲ. ಇದ್ರಿಂದ ಬಡ ಕುಟುಂಬಗಳಿಗೆ ಸಿಗಬೇಕಾದ ಸವಲತ್ತು ನಿಂತು ಹೋಗಿದೆ.

ಕಳೆದ 9 ವರ್ಷಗಳಿಂದ ವಕ್ಫ್ ಬೋರ್ಡ್ ಗೆ ಚುನಾವಣೆ ನಡೆಯದಂತೆ ಐದಾರು ಜನರು ಷಡ್ಯಂತ್ರ ನಡೆಸಿ ಆಸ್ತಿ, ಆದಾಯವನ್ನ ಕಬಳಿಸುತ್ತಿದ್ದಾರೆ ಎಂಬ ಆರೋಪವೂ ಇದೆ. 2014 ರಲ್ಲಿ ಚುನಾವಣೆ ನಡೆಯದ ಹಿನ್ನೆಲೆ ಅಂದಿನ ಆಡಳಿತ ಮಂಡಳಿ ಆಡಳಿತಾಧಿಕಾರಿಯನ್ನ ನೇಮಕ ಮಾಡಿದ್ದಾರೆ. ಆದರೆ ಆಡಳಿತಾಧಿಕಾರಿ ವಕ್ಫ್ ಬೋರ್ಡ್ ಗೆ ಬರಬೇಕಾದ ಆದಾಯವನ್ನ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ.

ಜನರ ಪ್ರತಿಭಟನೆಯ ಬಿಸಿ ರಾಜ್ಯ ವಕ್ಫ್ ಬೋರ್ಡ್ ಗೆ ಮುಟ್ಟಿದ್ದು, ಜನರ ಅಭಿಪ್ರಾಯ ಸಂಗ್ರಹಕ್ಕೆ ಪ್ರತಿನಿಧಿಯನ್ನ ಕಳಿಸಿದ್ದಾರೆ. ಪ್ರತಿನಿಧಿಯ ಮುಂದೆ ಚುನಾವಣೆ ನಡೆಸಬೇಕೆಂಬ ಬೇಡಿಕೆಯನ್ನ ಮುಸ್ಲಿಂ ಸಮುದಾಯದವರು ಮುಂದಿಟ್ಟಿದ್ದಾರೆ.

Edited By : Nagesh Gaonkar
PublicNext

PublicNext

13/07/2022 05:27 pm

Cinque Terre

31.86 K

Cinque Terre

0

ಸಂಬಂಧಿತ ಸುದ್ದಿ