ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಾಮರಾಜಪೇಟೆ ಬಂದ್: ಖಾಸಗಿ ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ,ಶಾಸಕರ ಕಚೇರಿಗೆ ತಲುಪಿದ ಕರಪತ್ರ!

ಬೆಂಗಳೂರು: ಚಾಮರಾಜಪೇಟೆ ಬಂದ್‌ನಿಂದಾಗಿ ಎಲ್ಲಾದರೂ ಅಹಿತಕರ ಘಟನೆ ನಡೆಯಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಚಾಮರಾಜಪೇಟೆ ಮತ್ತು ಸುತ್ತಮುತ್ತಲಿನ ಖಾಸಗಿ ಶಾಲಾ,ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಚಾರವಾಗಿ ಶಾಲಾ,ಕಾಲೇಜುಗಳ ಆಡಳಿತ ಮಂಡಳಿಗಳು ಈ ಕುರಿತು ವಿದ್ಯಾರ್ಥಿಗಳು ಪೋಷಕರಿಗೆ ಸಂದೇಶ ಕಳುಹಿಸಿವೆ. ಆದರೆ ಸರ್ಕಾರಿ ಶಾಲಾ,ಕಾಲೇಜುಗಳಿಗೆ ಇನ್ನೂ ರಜೆಯ ಘೋಷಣೆ ಮಾಡಿಲ್ಲ. ಪರಿಸ್ಥಿತಿ ಅವಲೋಕಿಸಿಕೊಂಡು ರಜೆ ನೀಡುವ ಸಾಧ್ಯತೆಯಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.

ಹಿಂದೂ ಸಂಘಟನೆಗಳ ಸದಸ್ಯರು ಈಗಾಗಲೇ ಚಾಮರಾಜಪೇಟೆಯಲ್ಲಿರುವ ಶಾಸಕ ಜಮೀರ್ ಅಹಮ್ಮದ್ ಖಾನ್‌ ಕಚೇರಿಗೆ ತೆರಳಿ ಬಂದ್‌ಗೆ ಬೆಂಬಲ ಕೋರಿದ್ದಾರೆ ಎನ್ನುವ ವಿಚಾರ ಬಹಿರಂಗವಾಗಿದೆ.

ಎಂ.ಎಲ್.ಎ ಆಪ್ತ ಸಹಾಯಕರಿಗೆ ಕರಪತ್ರ:

ಈ ವೇಳೆ ಜಮೀರ್ ಅಹಮ್ಮದ್ ಮನೆಯಲ್ಲಿ ಇಲ್ಲದ ಕಾರಣ ಮನೆಯಲ್ಲಿದ್ದ ಆಪ್ತ ಸಹಾಯಕರಿಗೆ ಕರಪತ್ರ ನೀಡಲಾಗಿದೆ ಎಂದು ಹಿಂದೂ ಸಂಘಟನೆಗಳ ಸದಸ್ಯರು ಮಾಹಿತಿ ನೀಡಿದ್ದಾರೆ.

Edited By :
Kshetra Samachara

Kshetra Samachara

12/07/2022 11:21 am

Cinque Terre

972

Cinque Terre

2

ಸಂಬಂಧಿತ ಸುದ್ದಿ