ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಿಷ್ಯನ ಬರ್ತ್ ಡೇ ಸಂಭ್ರಮ; ಬೆಳ್ಳಂಬೆಳಗ್ಗೆಯೇ ವಿಶ್ ಮಾಡಲು ಮನೆಗೆ ಬಂದ ಡಿಕೆಶಿ

ದೊಡ್ಡಬಳ್ಳಾಪುರ: ಕೆಎಂಎಫ್, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್ ಅವರಿಗೆ 45ನೇ ಹುಟ್ಟುಹಬ್ಬದ ಸಂಭ್ರಮ. ಶಿಷ್ಯನ ಬರ್ತ್ ಡೇ ಗೆ ವಿಶ್ ಮಾಡಲಿಕ್ಕೆಂದು ಖುದ್ದು ಡಿ.ಕೆ.ಶಿವಕುಮಾರ್, ಆನಂದ್ ಅವರ ಮನೆಗೆ ಬಂದಿದ್ರು.

ಬಿ.ಸಿ.ಆನಂದ್ ಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದು ಗುರು-ಶಿಷ್ಯರ ಸಂಬಂಧ. ಡಿಕೆಶಿ ಮಾರ್ಗದರ್ಶನದಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಸಿ.ಆನಂದ್ ಕುಮಾರ್ ಪ್ರಬಲ ನಾಯಕರಾಗಿ ಬೆಳೆಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮೇಲಿನ ಅಭಿಮಾನದಲ್ಲಿ ತಾಲೂಕಿನಲ್ಲಿ ಅಖಿಲ ಕರ್ನಾಟಕ ಡಿಕೆಶಿ ಬ್ರದರ್ಸ್ ಅಭಿಮಾನಿಗಳ ಸಂಘ ಕಟ್ಟಿದ್ದಾರೆ. ಶಿಷ್ಯನ 45ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಡಿ.ಕೆ.ಶಿವಕುಮಾರ್ ಇಂದು ಮುಂಜಾನೆ 5 ಗಂಟೆಗೇ ಆನಂದ್ ಮನೆಗೆ ಬಂದಿದ್ದರು.

ಇನ್ನು, ಬಿ.ಸಿ.ಆನಂದ್ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಸಾರ್ಥಕತೆ ಕಂಡರು. 50 ಮಹಿಳೆಯರಿಗೆ ಸಾಮೂಹಿಕ ಸೀಮಂತ ಮಾಡಿದ್ದಲ್ಲದೆ ಅವರಿಗೆ ಸೀರೆಯನ್ನೂ ಉಡುಗೊರೆ ನೀಡಿದರು.

Edited By : Nagesh Gaonkar
PublicNext

PublicNext

10/07/2022 08:20 pm

Cinque Terre

46.39 K

Cinque Terre

0

ಸಂಬಂಧಿತ ಸುದ್ದಿ