ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಾ|| ಡಿ.ವೀರೇಂದ್ರ ಹೆಗ್ಗಡೆ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಸರಿಯಾದ ಆಯ್ಕೆ: ಸಿಎಂ

ರಿಪೋರ್ಟ್- ರಂಜಿತಾಸುನಿಲ್.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದ್ದು, ಇಂತಹ ಆಯ್ಕೆ ಗುಣಾತ್ಮಕವಾದ ಬದಲಾವಣೆಯ ಹೊಸ ಕಲ್ಪನೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಕರ್ನಾಟಕ ಗೌರವ ಹಾಗೂ ಹೆಮ್ಮೆಪಡುವಂತಹ ವಿಷಯವಾಗಿದೆ. ಪ್ರತಿಫಲಾಪೇಕ್ಷೆಯಿಲ್ಲದೇ ಜನಕಲ್ಯಾಣಕ್ಕಾಗಿ ಸುದೀರ್ಘ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.

ಜನರ ಸಮಸ್ಯೆಗಳನ್ನು ಗುರುತಿಸಿ, ಶುದ್ಧ ಕುಡಿಯುವ ನೀರಿನ ಘಟಕ, ಕೆರೆಗಳ ನಿರ್ಮಾಣ, ಕೃಷಿ ಯಂತ್ರೋಪಕರಣ ಪೂರೈಕೆ, ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು, ಮದ್ಯವ್ಯಸನ ವಿರೋಧಿ ಅಭಿಯಾನ, ಹೀಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸಗಳನ್ನು ಮಾಡಿರುವ ಶ್ರೀಯುತರು ಕೇವಲ ಮಾತಿನಲಲ್ಲ, ಕೃತಿಯಲ್ಲಿಯೂ ಅವರ ಸೇವೆ ಅಮೋಘವಾದದ್ದು. ಒಬ್ಬ ವ್ಯಕ್ತಿ ಸರ್ಕಾರಕ್ಕೆ ಸರಿಸಮಾನವಾಗಿ ಜನಪರ ಕೆಲಸ ಮಾಡುತ್ತಿರುವುದು ಒಂದು ದಾಖಲೆ. ಇವರ ಕೆಲಸಗಳು ಇತರ ರಾಜ್ಯಗಳಿಗೂ ಮಾದರಿಯಾಗಿದೆ.

ಶ್ರೇಷ್ಠ ವ್ಯಕ್ತಿತ್ವದ ಹಿರಿಯರಿಗೆ ರಾಜ್ಯಸಭಾ ಸದಸ್ಯರ ಸ್ಥಾನ ದೊರೆತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಇದರಿಂದ ರಾಜ್ಯಸಭೆಗೆ ದೊಡ್ಡ ಗೌರವ ಸಿಗಲಿದೆ. ಕರ್ನಾಟಕದ ಶ್ರೇಷ್ಠ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂದರು.

Edited By : Nagesh Gaonkar
PublicNext

PublicNext

07/07/2022 10:14 pm

Cinque Terre

48.48 K

Cinque Terre

0

ಸಂಬಂಧಿತ ಸುದ್ದಿ