ಬೆಂಗಳೂರು: ಚಾಮರಾಜಪೇಟೆ ಮೈದಾನದ ವಿವಾದ ತೀವ್ರಗೊಂಡಿದ್ದು, ಮೈದಾನದ ಹಕ್ಕಿಗೆ ಸಂಬಂಧಿಸಿದಂತೆ ಬಿಬಿಎಂಪಿ ನೀಡಿರುವ ಗೊಂದಲದ ಹೇಳಿಕೆ ಖಂಡಿಸಿ ನಾಗರಿಕರ ಸಂಘಟನೆಗಳ ಒಕ್ಕೂಟ ಇಂದು ಮಹತ್ವದ ಸಭೆ ನಡೆಸಿ ವಿವಾದವನ್ನು ಬಗೆಹರಿಸದಿದ್ದರೆ ಚಾಮರಾಜಪೇಟೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಚಾಮರಾಜಪೇಟೆ ಮೈದಾನದ ಹಿಂದೂ ಸಂಘಟನೆಗಳಿಗೆ ಸೇರಿದ್ದು, ಈ ಸಂಬಂಧ ಎಲ್ಲಾ ದಾಖಲೆಗಳಿದ್ದರೂ ಬಿಬಿಎಂಪಿ ಆಯುಕ್ತರು ವಕ್ಫ್ ಬೋರ್ಡ್ ಆಸ್ತಿ ಎಂದು ಗೊಂದಲದ ಹೇಳಿಕೆ ನೀಡಿದ್ದಾರೆ. ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು. ಚಾಮರಾಜಪೇಟೆ ನಾಗರೀಕರು, ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇಂದು ಜಂಗಮ ಮಠದಲ್ಲಿ ಸಮಾವೇಶ ನಡೆಸಿ ಸಮಾಲೋಚನೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕ ಜಮೀರ್ ಆಗಮಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.
ಎಲ್ಲೋ ಕೂತುಕೊಂಡು ಆಟವಾಡುವ ಅಗತ್ಯವಿಲ್ಲ. ಈ ಜಾಗ ಹಿಂದುಗಳಿಗೆ ಸೇರಿದ್ದು, ಅದನ್ನು ನಮಗೆ ಬಿಟ್ಟುಕೊಡಬೇಕು. ನಾವು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಬಿಬಿಎಂಪಿ ಆಯುಕ್ತರು ಯಾವುದೋ ಒತ್ತಡಕ್ಕೆ ಮಣಿದು ಗೊಂದಲದ ಹೇಳಿಕೆ ನೀಡಿದ್ದಾರೆ ಎಂದು ಸಂಘಟನೆಗಳ ಮುಖಂಡರು ಹೇಳಿದರು.
ಜುಲೈ 12 ರಂದು ಚಾಮರಾಜಪೇಟೆ ಬಂದ್:
ಈದ್ಗಾ ಮೈದಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಾಮಕರಣ ಮಾಡುತ್ತೇವೆ. ಬಿಬಿಎಂಪಿ ಸೂಕ್ತ ಕ್ರಮ ಕೈಗೊಂಡು ವಿವಾದ ಬಗೆಹರಿಸದಿದ್ದರೆ ಜುಲೈ 12 ರಂದು ಚಾಮರಾಜಪೇಟೆ ಬಂದ್ ಗೆ ಕರೆಕೊಡಬೇಕಾಗುತ್ತದೆ. ಈ ಹೋರಾಟವನ್ನು ನಾವು ಇಲ್ಲಿಗೆ ಕೈ ಬಿಡುವುದಿಲ್ಲ ನಿರಂತರವಾಗಿರುತ್ತದೆ ಎಂದರು.
PublicNext
03/07/2022 05:14 pm