ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆರ್ಯರು-ದ್ರಾವಿಡರು ಎಂದು ಸಿದ್ದರಾಮಯ್ಯ ಸಮಾಜವನ್ನು ಒಡೆಯೊ ಕೆಲಸ ಮಾಡಬಾರದು

ಯಲಹಂಕದಲ್ಲಿ ನಡೆದ ವೀರಶೈವ ಸಮೂದಾಯದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಹಿತವಚನದ ಮೂಲಕ‌ ವಿನಂತಿಸಿದರು.

ಪಠ್ಯಪುಸ್ತಕ‌ ಪರಿಷ್ಕರಣೆ ಸಂಬಂಧ ವಿರೋಧ ಪಕ್ಷಗಳು ಸರ್ಕಾರವನ್ನು ತೆಗಳುತ್ತಿವೆ. ಇದೇ ವೇಳೆ ಸಿದ್ದರಾಮಯ್ಯ RSS ನ‌ ಮೂಲದ ಬಗ್ಗೆ ಕೆದಕುತ್ತಾ, ಆರ್ಯರು ಮತ್ತು ದ್ರಾವಿಡರು ಬೇರೆ ಬೇರೆ ಎಂದು ಭಾರತೀಯರನ್ನು ಪ್ರತ್ಯೇಕಿಸಲಾಗಿದೆ. ಬ್ರಿಟೀಷರ ಒಡೆದು ಆಳುವ ನೀತಿಯ ಅಸ್ತ್ರವನ್ನು ಸಿದ್ದರಾಮಯ್ಯ ರಾಜ್ಯ ಸರ್ಕಾರದ ಮೇಲೂ ಪ್ರಯೋಗಿಸಿದ್ದಾರೆ.

ಆರ್ಯರು ಬೇರೆ ದೇಶಗಳಿಂದ ಬಂದವರು. ದ್ರಾವಿಡರು ಮೂಲನಿವಾಸಿಗಳು ಎಂದು ಹೇಳುತ್ತಾ ಭಾರತೀಯರ ಒಗ್ಗಟ್ಟನ್ನು ಸಡಲಿಗೊಳಿಸುವ ಮಾತಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಶ್ನೆಗೆ ಉತ್ತರಿಸುತ್ತಾ, ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿರುವ ಜವಾಬ್ದಾರಿ ನಾಯಕರು. ಅವರಿಂದ ಇಷ್ಟು ಕೀಳುಮಟ್ಟದ ಮನಸ್ಥಿತಿನ ನಿರೀಕ್ಷಿಸಿರಲಿಲ್ಲ. ಮುಂದೆ ಈ ರೀತಿ ದೇಶ ಒಡೆಯೋ ಮಾತನಾಡದಿರಲಿ ಎಂದು ಯಡಿಯೂರಪ್ಪ ಸಿದ್ದರಾಮಯ್ಯರಿಗೆ ವಿನಂತಿಸಿದರು.

Edited By :
PublicNext

PublicNext

29/05/2022 08:44 pm

Cinque Terre

18.21 K

Cinque Terre

1

ಸಂಬಂಧಿತ ಸುದ್ದಿ