ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು :‌ ಅಧ್ಯಕ್ಷ- ಸದಸ್ಯ ವಾಕ್ಸಮರ!; ಗ್ರಾಮಸಭೆ 'ಹರೋಹರ'

ಆನೇಕಲ್ : ಸಾರ್ವಜನಿಕರ ಕುಂದುಕೊರತೆ ಆಲಿಸಲು ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಪಂಚಾಯಿತಿ ಸದಸ್ಯ ಹಾಗೂ ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿ ನಡೆದು ಕೆಲಹೊತ್ತು ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.

ಆನೇಕಲ್ ನ ಕರ್ಪೂರು ಗ್ರಾಮ ಪಂಚಾಯಿತಿಯ ಮೊದಲ ಸುತ್ತಿನ ಗ್ರಾಮ ಸಭೆ ಏರ್ಪಡಿಸಲಾಗಿತ್ತು. ಗ್ರಾಮಸ್ಥರೇ ಇಲ್ಲದ ಕಾರಣಕ್ಕೆ ಸದಸ್ಯ ಹಾಲ್ದೇನಹಳ್ಳಿ ತಿಮ್ಮರಾಜು, ಗ್ರಾಮ ಸಭೆಯಲ್ಲಿ ಕೋರಂ ಇಲ್ಲ. ಸಭೆ ಮುಂದೂಡಿ ಎಂದು ಒತ್ತಾಯಿಸಿದರು. ಬಳಿಕ ಅಧ್ಯಕ್ಷರಿಗೆ ನೀವು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್. ಅಧ್ಯಕ್ಷ ಸ್ಥಾನ ಬಿಟ್ಟುಕೊಡು, ನಾನು ಏನಂತ ತೋರಿಸ್ತೀನಿ ಅಂತ ಏಕವಚನದಲ್ಲಿ ಮಾತನಾಡಿದ್ದಾರೆ.

ಆಗ ಅಧ್ಯಕ್ಷ ಪಿ.ರಾಜು ಹಾಗೂ ತಿಮ್ಮರಾಜು ನಡುವೆ ವಾಕ್ಸಮರ ನಡೆದು ಇಬ್ಬರೂ ಪರಸ್ಪರ ಏಕವಚನದಲ್ಲೇ ನಿಂದಿಸಿದ್ದಾರೆ.

ಈ ಸಂದರ್ಭ ಮಧ್ಯಪ್ರವೇಶಿಸಿದ ಪೊಲೀಸರು ಇಬ್ಬರನ್ನೂ ಸಮಾಧಾನ ಪಡಿಸಿದರು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಪಿ. ರಾಜು, ನಾನು ಕೂಡ ಈ ರೀತಿಯಾಗಿ ಮಾತನಾಡಬಾರದಿತ್ತು. ಅವರಲ್ಲಿ ನಾನು ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ- ಸದಸ್ಯರಿಬ್ಬರೂ ಬಿಜೆಪಿ ಬೆಂಬಲಿತರೇ ಆಗಿದ್ದು, ಸಮಸ್ಯೆ ಬಗೆಹರಿಸುವ ಜನಪ್ರತಿನಿಧಿಗಳ ಈ ರೀತಿಯ ವರ್ತನೆಯನ್ನು ಗ್ರಾಮಸ್ಥರು ಖಂಡಿಸಿದ್ದಾರೆ. ಒಟ್ಟಾರೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿದ್ದ ಗ್ರಾಮಸಭೆ ಈ ಜಗಳದಿಂದಾಗಿ ಅರ್ಧಕ್ಕೇ ಸ್ಥಗಿತಗೊಂಡಿದೆ.

Edited By : Shivu K
Kshetra Samachara

Kshetra Samachara

17/05/2022 11:08 pm

Cinque Terre

4.84 K

Cinque Terre

0

ಸಂಬಂಧಿತ ಸುದ್ದಿ