ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಸೀದಿಗಳಲ್ಲಿ ಆಜಾನ್ ಬೆಳಗ್ಗೆ 5 ಗಂಟೆಗೆ ಕೂಗದಿರಲು ನಿರ್ಧಾರ

ಬೆಂಗಳೂರು: ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೆ ಅಜಾನ್ ಕೂಗದಿರಲು ನಗರದಲ್ಲಿ ನಿನ್ನೆ ನಡೆದ ಮುಸ್ಲಿಂ ‌ಮುಖಂಡರ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

ಬೆಳಗ್ಗೆ 5 ಗಂಟೆಗೆ ದ್ವನಿವರ್ದಕ ಗಳಲ್ಲಿ ಅಜಾನ್ ಕೂಗದಂತೆ ಎಲ್ಲಾ ಮಸೀದಿ ಮುಸ್ಲಿಂ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 5 .15-5.30ಕ್ಕೆ ಮೈಕ್ ನಲ್ಲಿ ಅಜಾನ್ ಕೂಗಬಾರದು. ಸರ್ಕಾರದ ನಿಯಮ ಪಾಲಿಸುವಂತೆ ಮೌಲಾನಾ ಮಕ್ಸೂದ್ ತಿಳಿಸಿದ್ದು, ಪೊಲೀಸರು ಅನುಮತಿ ಪಡೆದು ಬೆಳಗ್ಗೆ 6 ಗಂಟೆಯ ಬಳಿಕ ಅಜಾನ್ ಕೂಗಲು ಸೂಚನೆ ನೀಡಿದ್ದಾರೆ.

ಮಸೀದಿಗಳಲ್ಲಿ ಆಜಾನ್ ನಿಷೇಧಿಸ ಬೇಕೆಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ್ದ ಸರ್ಕಾರ ಬೆಳಗ್ಗೆ 6ರಿಂದ 10ಗಂಟೆವರೆಗೆ ಧ್ವನಿವರ್ಧಕಗಳನ್ನು ನಿಷೇದಿಸಿತ್ತು.

Edited By : PublicNext Desk
PublicNext

PublicNext

14/05/2022 03:57 pm

Cinque Terre

14.65 K

Cinque Terre

1

ಸಂಬಂಧಿತ ಸುದ್ದಿ