ವರದಿ - ಗಣೇಶ್ ಹೆಗಡೆ
ಬೆಂಗಳೂರು : ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವ ಗುತ್ತಿಗೆದಾರ ಸಂತೋಷ್ ಸಾವು ಪ್ರಕರಣ ಇದೀಗ ಹೊಸ ದಂಧೆಯನ್ನು ಹೊರಗೆಡವಿದೆ.
ಸರ್ಕಾರದ ಅನುಮತಿ ಮತ್ತು ಕಾರ್ಯಾದೇಶ ಪಡೆಯದೇ ಕಾಮಗಾರಿ ನಡೆಸುವ ದಂಧೆ ಬಯಲಾಗಿದೆ.ಇದೇ ದಂಧೆ ಅಮಾಯಕ ಸಂತೋಷ ಬಲಿ ಪಡೆದಿರುವ ಅನುಮಾನ ಹುಟ್ಟಿದೆ.
ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ದಲ್ಲಿ ಕಾರ್ಯಾದೇಶ ಇಲ್ಲದೆ 400-500 ಕೋಟಿ ಕಾಮಗಾರಿ ನಡೆದಿದೆ ಎನ್ನಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಬಿಬಿಎಂಪಿ ಸೇರಿದಂತೆ ಅನೇಕ ಇಲಾಖೆಯಿಂದ ಕೋಟಿ ಕೋಟಿ ಕಾಮಗಾರಿ ನಡೆದಿದೆ.
ಈ ಬಗ್ಗೆ ಆಳವಾದ ತನಿಖೆ ನಡೆದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತೊಂದರೆ ಆಗಲಿದೆ. 5 ಲಕ್ಷಕ್ಕಿಂತ ಕಮ್ಮಿ ಮೊತ್ತ ಇರುವ ಸಾವಿರಾರು ವರ್ಕ್ ಗುತ್ತಿಗೆದಾರರು ಮಾಡಿದ್ದಾರೆ. ಕೆಲವರಿಗೆ ಹಣ ಬಂದಿದ್ದು,ಹಲವು ಗುತ್ತಿಗೆದಾರರಿಗೆ ಬಾಕಿ ಇದೆ.
ಈ ರೀತಿಯ ಹೊಸ ದಂಧೆ ಶಾಸಕರ ಹಾಗೂ ಸಚಿವರಿಂದ ನಡೆಯುತ್ತೆ ಎಂಬುದು ಗುತ್ತಿಗೆದಾರರ ಆರೋಪವಾಗಿದೆ.
PublicNext
18/04/2022 06:41 pm