ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನಾಡಿನ ಜನತೆ ಯುಗಾದಿ ಶುಭಾಶಯ ಕೋರಿದ ರಾಹುಲ್ ಗಾಂಧಿ

ದೊಡ್ಡಬಳ್ಳಾಪುರ: ಸಿದ್ದಗಂಗಾ ಮಠಕ್ಕೆ ಹೋಗುವ ದಾರಿ ಮಧ್ಯೆ ದೊಡ್ಡಬಳ್ಳಾಪುರದಲ್ಲಿ ವೇದಿಕೆ ಏರಿದ ರಾಹುಲ್ ಗಾಂಧಿ ನಾಡಿನ ಜನತೆ ಯುಗಾದಿ ಶುಭಾಶಯ ಕೋರಿದರು.

ತ್ರಿವಿಧ ದಾಸೋಹಿ ಶಿವಕುಮಾರ್ ಸ್ವಾಮಿಯವರ 115ನೇ ಜಯಂತೋತ್ಸವ ಮುನ್ನದಿನವಾದ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲು ಬಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದರು. ಸಿದ್ದಗಂಗಾ ಮಠಕ್ಕೆ ಹೋಗುವ ದಾರಿ ಮಧ್ಯೆ ಸಿಗುವ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ರಾಹುಲ್ ಗಾಂಧಿಗೆ ಸ್ವಾಗತ ಕೋರಲು ವೇದಿಕೆ ಸಿದ್ದತೆ ಮಾಡಲಾಗಿತ್ತು.

ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದ ಮುಂಭಾಗದಲ್ಲೂ ರಾಹುಲ್ ಗಾಂಧಿಗೆ ಶುಭಾಶಯ ಕೋರಲು ವೇದಿಕೆ ಸಿದ್ದ ಮಾಡಲಾಗಿತ್ತು. ವೇದಿಕೆ ಏರಿದ ರಾಹುಲ್ ಗಾಂಧಿ,ನಾಡಿನ ಜನತೆ ಯುಗಾದಿ ಹಬ್ಬದ ಶುಭಾಶಯ ಕೊರಿದರು. ರಾಹುಲ್ ಗಾಂಧಿಗೆ ಕ್ರೇನ್ ಮೂಲಕ ಬೃಹತ್ ಹೂವಿನ ಹಾರದ ಸ್ವಾಗತ ಕೊರಲಾಯಿತು. ರಾಹುಲ್ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನ ಸಾಥ್ ನೀಡಿದರು.

ಇದೇ ಸಮಯದಲ್ಲಿಯೇ ಕ್ರೇನ್ ಮೇಲಿನ ಅಪಾಯಕಾರಿ ಜಾಗದಲ್ಲಿ ಕುಳಿತ ಅಭಿಮಾನಿಗೆ ಕೆಳಗೆ ಇಳಿಯುವಂತೆ ರಾಹುಲ್ ಗಾಂಧಿ ಹೇಳಿದರು.ಆದರೂ ಕಾರ್ಯಕರ್ತರು ಹೂಮಳೆ ಸುರಿಯುವುದನ್ನ ಮುಂದುವರೆಸಿದರು.

Edited By : Manjunath H D
PublicNext

PublicNext

31/03/2022 07:04 pm

Cinque Terre

25.52 K

Cinque Terre

0

ಸಂಬಂಧಿತ ಸುದ್ದಿ