ನೆಲಮಂಗಲ: ಕೆಂಪು ಕೋಟೆ ಮೇಲೆ ರಾಷ್ಟ್ರಧ್ವಜದ ಜಾಗದಲ್ಲಿ ಕೇಸರಿಧ್ವಜ ಹಾರಿಸುತ್ತೇವೆಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಒಂದೆಡೆ ಕಾಂಗ್ರೆಸ್ ಪಕ್ಷದ ನಾಯಕರು ಸದನದಲ್ಲಿ ಅಹೋ ರಾತ್ರಿ ಧರಣಿ ಮಾಡ್ತಿದ್ರೆ, ಇಂದು ನೆಲಮಂಗಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾಜಿ ಸಚಿವ ಅಂಜನಮೂರ್ತಿ ನೇತೃತ್ವದಲ್ಲಿ ಪಕ್ಷದ ಹಲವು ಮುಖಂಡರು, ಕಾರ್ಯಕರ್ತರು ಈಶ್ವರಪ್ಪ ವಿರುದ್ಧ ರಸ್ತೆತಡೆ ನಡೆಸಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ನಗರ ತಾಲೂಕು ಕಚೇರಿ ಆವರಣದಲ್ಲಿ ಹರಕಲು ಬಾಯಿ ಸಚಿವ ಈಶ್ವರಪ್ಪನನ್ನು ರಾಜ್ಯಪಾಲರು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ, ರಾಷ್ಟ್ರದ್ರೋಹದ ಮಾತುಗಳನ್ನಾಡಿದ ಈಶ್ವರಪ್ಪ ರಾಜೀನಾಮೆ ನೀಡುವಂತೆ ಆಗ್ರಹಿಸಿ ಉಪ ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ತಾಲೂಕಿನ ಎಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು.
Kshetra Samachara
21/02/2022 01:58 pm