ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಮುನಿಶ್ಯಾಮಣ್ಣರಿಂದ ಮೂಲ ಕಾಂಗ್ರೇಸಿಗರಿಗೆ ವಂಚನೆಯಾಗಿದೆ ಎಂದು ಹೊಸಕೋಟೆಯ ಕೆಲವು ನಾಯಕರು ಸಿದ್ದರಾಮಯ್ಯ ರವರಿಗೆ ದೂರು ನೀಡಿದ್ದರು. ಈ ಆರೋಪ ಸಂಬಂಧ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಹೊಸಕೋಟೆಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ..ನಾವು ಮೂಲ ಕಾಂಗ್ರೇಸಿಗರು, ಅಡ್ಜಸ್ಟ್ಮೆಂಟ್ ಕಾಂಗ್ರೆಸ್ಸಿಗರಲ್ಲ ಎಂದು CLP ನಾಯಕರಿಗೆ ದೂರುಕೊಟ್ಟವರ ಕಾಲೆಳೆದಿದ್ದಾರೆ..
ಕಳೆದ ಉಪ ಚುನಾವಣೆಲಿ MTB.ನಾಗರಾಜ್ ಪಕ್ಷ ಬಿಟ್ಟಾಗ ನಮ್ಮ ತಾಲೂಕಿನಲ್ಲಿ ಸ್ವರ್ದೆ ಮಾಡೋರು ಇರಲಿಲ್ಲ..ಆಗ ಪದ್ಮಾವತಿ ಸುರೇಶರನ್ನ ಕರೆತಂದು ಚುನಾವಣೆ ಎದುರಿಸಿದ್ವಿ. ಪ್ರಾಮಾಣಿಕ ಕೆಲಸ ಮಾಡಿ 45ಸಾವಿರ ಮತ ಪಡೆದಿದ್ದೀವಿ.ನಮ್ಮ CLP ಅಧ್ಯಕ್ಷರು ಶರತ್ ಬಚ್ಚೇಗೌಡ ಜೊತೆ ಇರಿ ಅಂದಿದಕ್ಕೆ, ಅವರ ಜೊತೆ ಕೆಲಸ ಮಾಡ್ತೀದ್ದೀವಿ.
ನಾನು ಯಾರ ಜೊತೆಯು ಶಾಮಿಲಾಗಿಲ್ಲ..ನಮ್ಮದು 45 ಸಾವಿರ ಮತ ಸ್ವಾಭಿಮಾನಿ ಶರತ್ ಬಚ್ಚೇಗೌಡರದ್ದು 80 ಸಾವಿರ ಮತವಿದೆ..ಹೀಗಾಗಿ ನಾವು ಒಟ್ಟಾಗಿ ಕೆಲಸ ಮಾಡ್ತೀದ್ದೀವಿ..
ಕಾಣದ ಕೈಗಳು ಇದೀಗ ನಮ್ಮ ಮೇಲೆ ಪಿತೂರಿ ಮಾಡ್ತಿದ್ದಾರೆ.ಷಡ್ಯಂತ್ರಗಳಿಗೆ ನಾವು ಭಯಪಡಲ್ಲ. ನಾಯಕರನ್ನ ಬೇಟಿ ಮಾಡಿ ನಡೆದ ವಿಚಾರ ಅವರ ಗಮನಕ್ಕೆ ತರ್ತಿವಿ..ಮೂಲ ಕಾಂಗ್ರೇಸ್ಸಿಗರು ನಾವು.. ಅವರು ಅಡ್ಜೆಸ್ಟಮೆಂಟ್ ಕಾಂಗ್ರೇಸ್ಸಿಗರು ಎಂದು ಅಪಸ್ವರ ಎತ್ತಿದ್ದವರಿಗೆ ಟಾಂಗ್ ನೀಡಿದ್ದಾರೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನಿಶ್ಯಾಮಣ್ಣ.
Kshetra Samachara
07/02/2022 06:14 pm