ಬೆಂಗಳೂರು: ಹಾಲು ಉತ್ಪಾದಕರ ಸಂಘ ಮತ್ತು ಸಿಬ್ಬಂದಿಗಳಿಗೆ 2020-21 ನೇ ಸಾಲಿನ ಪ್ರಶಸ್ತಿ ವಿತರಣೆ ಹಾಗೂ ಕೋವಿಡ್ ನಿಂದ ಮರಣ ಹೊಂದಿದವರಿಗೆ ಚೆಕ್ ವಿತರಿಸಲಾಯಿತು. ಬೆಂಗಳೂರು ಪೂರ್ವ ತಾಲೂಕಿನ ಮಹದೇವಪುರ ಕ್ಷೇತ್ರದ ಕಾಟಂನಲ್ಲೂರು ಗೇಟ್ ಬಳಿ ಆಯೋಜಿಸಲಾಗಿದ್ದ ಪರಿಹಾರದ ಕಾರ್ಯಕ್ರಮದಲ್ಲಿ ಸಕ್ರಿಯ ಹಾಲು ಉತ್ಪಾದಕರ ಅವಲಂಬಿತರಿಗೆ ಶಾಸಕ ಅರವಿಂದ್ ಲಿಂಬಾವಳಿ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಕೊರೊನಾ ವೈರಸ್ ರಾಜ್ಯ ಹಾಗೂ ದೇಶವನ್ನು ಕಾಡುತ್ತಿದೆ.ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಬೆಂಗಳೂರು ಡೈರಿ ವತಿಯಿಂದ ಕೋವಿಡ್ ನಿಂದ ಮೃತಪಟ್ಟ ಡೈರಿಯ ಸದಸ್ಯರಿಗೆ ಒಂದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸುತ್ತಿರುವುದು ಸಂತಸ ತಂದಿದೆ ಎಂದರು.
Kshetra Samachara
05/02/2022 08:56 pm