ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾನು ಜನ್ಮ ದಿನ ಆಚರಿಸಿಕೊಳ್ಳುತ್ತಿಲ್ಲ: ಸಿಎಂ ಬೊಮ್ಮಾಯಿ

ಬೆಂಗಳೂರು:ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜನ್ಮ ದಿನ ಇವತ್ತು.62ಕ್ಕೆ ಕಾಲಿಟ್ಟ ಸಿಎಂ ಜನ್ಮ ದಿನವನ್ನ ಆಚರಿಸಿಕೊಳ್ಳುತ್ತಿಲ್ಲ. ಆದರೂ ರಾಜ್ಯಾದ್ಯಂತ ಜನ,ಸ್ನೇಹಿತರು, ಶಾಸಕರು ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ.

ಈ ಕುರಿತು ಸ್ವತಃ ಸಿಎಂ ಇಂದು ಬೆಂಗಳೂರಿನಲ್ಲಿ ಮಾತನಾಡಿದ್ದಾರೆ. ನನ್ನ ಜನ್ಮ ದಿನಕ್ಕೆ ರಾಜ್ಯದ ಜನತೆ ಶುಭ ಹಾರೈಸುತ್ತಿದ್ದಾರೆ. ಸ್ನೇಹಿತರು,ಶಾಸಕರು ಕೂಡ ಶುಭ ಹಾರೈಸಿದ್ದಾರೆ. ನಿನ್ನೆಯ ದಿನವೇ ರಾಷ್ಟ್ರಪತಿಗಳೂ ಶುಭ ಹಾರೈಸಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನಮ್ಮ ಸರ್ಕಾರಕ್ಕೆ ಈಗ 6 ತಿಂಗಳಾಗಿದೆ. ಕೋವಿಡ್ ನಿರ್ವಹಣೆ,ಪ್ರವಾಹ ನಿರ್ವಹಣೆ ಬಗ್ಗೆ ಕಿರುಹೊತ್ತಿಗೆ ಬಿಡುಗಡೆ ಮಾಡ್ತೀನಿ. ರಾಜ್ಯದ ಆರ್ಥಿಕ ದೃಷ್ಟಿಯಿಂದ ಒಳ್ಳೆ ಬಜೆಟ್ ನೀಡಬೇಕಿದೆ ಅಂತಲೂ ತಿಳಿಸಿದ್ದಾರೆ ಸಿಎಂ ಬಸವರಾಜ್ ಬೊಮ್ಮಾಯಿ.

Edited By : Nagesh Gaonkar
PublicNext

PublicNext

28/01/2022 01:00 pm

Cinque Terre

37.04 K

Cinque Terre

1

ಸಂಬಂಧಿತ ಸುದ್ದಿ