ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನೂ ಎಷ್ಟೋ ಜನರನ್ನ ತಳ್ಳಿದೀನಿ: ಸುರೇಶಣ್ಣ ಮಾಡಿದ್ದು ತಪ್ಪಲ್ಲ: ಮೊಹಮ್ಮದ್ ನಲಪಾಡ್ ಸ್ಪಷ್ಟನೆ

ರಾಮನಗರ: ಕಾಂಗ್ರೆಸ್ ಪಕ್ಷದವರಾದ ನಾವೆಲ್ಲ ಒಂದು ಕುಟುಂಬ ಇದ್ದಂತೆ. ನಾವು ನೀರಿಗಾಗಿ ಹೋರಾಟ ಮಾಡ್ತಿದ್ದೇವೆ. ಇದಕ್ಕೆ ಸಾವಿರಾರು ಜನ ಬೆಂಬಲಿಸಿ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಈ ನಡುವೆ ಸಂಸದ ಡಿ.ಕೆ ಸುರೇಶ್ ಅವರು ನನ್ನನ್ನು ಪಕ್ಕಕ್ಕೆ ತಳ್ಳಿದ ಚಿಕ್ಕ ವಿಷಯವನ್ನು ಮಾಧ್ಯಮಗಳು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿವೆ ಎಂದು ಕಾಂಗ್ರೆಸ್ ಯುವನಾಯಕ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

ಮೇಕೆದಾಟು ಪಾದಯಾತ್ರೆ ಸಾಗುವ ವೇಳೆ ರಾಮನಗರ ಜಿಲ್ಲೆಯ ಚಿಕ್ಕೇನಹಳ್ಳಿಯಲ್ಲಿ ನಾಯಕರ ಮುಂದೆ ಬಂದ ಮೊಹಮ್ಮ‌ದ್ ನಲಪಾಡ್ ಅವರನ್ನು ಸಂಸದ ಡಿ.ಕೆ ಸುರೇಶ್ ಕೊರಳಪಟ್ಟಿ ಹಿಡಿದು ಪಕ್ಕಕ್ಕೆ ತಳ್ಳಿದ್ದರು. ನಂತರ ನಲಪಾಡ್‌ರನ್ನು ಕೆಂಗಣ್ಣಿನಿಂದ ನೋಡಿ ಗದರಿಸಿದ್ದರು. ಈ ಘಟನೆ ಬಗ್ಗೆ ಫೇಸ್‌ಬುಕ್ ಲೈವ್ ಮೂಲಕ ನಲಪಾಡ್ ಸ್ಪಷ್ಟನೆ ನೀಡಿದ್ದಾರೆ.‌

ಡಿ.ಕೆ ಸುರೇಶ್ ನನ್ನ ಅಣ್ಣ ಇದ್ದಂತೆ. ಅಣ್ಣನೊಬ್ಬ ತಮ್ಮನನ್ನು ತಳ್ಳಿದ್ದಾರಷ್ಟೇ. ತಳ್ಳುವಾಗ ಅವರು ನನ್ನ ಮುಖ ನೋಡಿರಲಿಲ್ಲ. ಇದರಿಂದ‌ ನನಗೆ ಎಳ್ಳಷ್ಟೂ ಬೇಜಾರಾಗಿಲ್ಲ. ನನ್ನ ತಮ್ಮ ಓಮರ್ ಇದ್ದಾನೆ. ಅವನನ್ನು ನಾನು ತಳ್ಳಿದರೆ ಅವನು ಬೇಜಾರಾಗೋದಿಲ್ಲ. ನಾನೂ ಈ ಹಿಂದೆ ಇತರರನ್ನು ತಳ್ಳಿದ್ದೇನೆ. ಇದು ದೊಡ್ಡ ವಿಷಯವಲ್ಲ. ನೀರಿಗಾಗಿ ಹೋರಾಡುತ್ತಿರುವ ನಮಗೆ ಮುಂದಿನ ತಲೆಮಾರಿನ ಬಗ್ಗೆ ಕಾಳಜಿ ಇದೆ. ಅದರ‌ ಮುಂದೆ ಈ ಸಣ್ಣ ಘಟನೆ ಏನೇನೂ ಅಲ್ಲ ಎಂದು ನಲಪಾಡ್ ಹೇಳಿದ್ದಾರೆ.

Edited By : Shivu K
PublicNext

PublicNext

12/01/2022 12:46 pm

Cinque Terre

30.75 K

Cinque Terre

17

ಸಂಬಂಧಿತ ಸುದ್ದಿ