ಬೆಂಗಳೂರು: ಬೆಂಗಳೂರು ಪೀಣ್ಯ ಕೈಗಾರಿಕೆ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಪೀಣ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಹಾಗೂ ಪ್ರಾಧಿಕಾರ ರಚನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಒತ್ತಾಯಿಸಿ ಇಂದು ಪೀಣ್ಯ ಕೈಗಾರಿಕಾ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಮಾಜಿ ಅಧ್ಯಕ್ಷ ಜೆ. ಕ್ರಾಸ್ಟಾ ಮಾತನಾಡಿ, 1970ರಲ್ಲಿ ಸ್ಥಾಪನೆಯಾದ ಪೀಣ್ಯ ಕೈಗಾರಿಕೆ ಪ್ರದೇಶ ಉತ್ತಮ ರಸ್ತೆ, ನೀರು, ಬೀದಿದೀಪವಿಲ್ಲದೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಪೀಣ್ಯ ಕೈಗಾರಿಕೆ ಸುಮಾರು 10 ಲಕ್ಷ ಕಾರ್ಮಿಕರಿಗೆ ಉದ್ಯೋಗ ಒದಗಿಸಿದೆ. ಅದ್ರಲ್ಲೂ ಗ್ರಾಮಾಂತರದ 4.5 ಲಕ್ಷ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ವಾರ್ಷಿಕ 3 ಸಾವಿರ ಕೋಟಿ ತೆರಿಗೆ ಪಾವತಿಸುತ್ತಿದ್ದೇವೆ. ಆದರೆ, 50 ವರ್ಷ ಕಳೆದ್ರೂ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದರು.
ಇನ್ನೊಬ್ರು ಮಾಜಿ ಅಧ್ಯಕ್ಷ ಪ್ರಥ್ವಿರಾಜ್ ಮಾತನಾಡಿ, ಸರ್ಕಾರ ಪೀಣ್ಯ ಪ್ರಾಧಿಕಾರ ರಚಿಸಿದರೆ ಅಭಿವೃದ್ಧಿಗೆ ಆನೆಬಲ ಸಿಕ್ಕಂತಾಗುತ್ತದೆ. ನಮ್ಮ ಕೈಗಾರಿಕೆಗಳಿಂದ ಸಂಗ್ರಹವಾಗುವ ಶೇ.70 ರಷ್ಟು ತೆರಿಗೆ ಹಣ ಅಭಿವೃದ್ಧಿ ನಿರ್ವಹಣೆಗೆ ಬಳಸಿಕೊಳ್ಳಲು ಅನುಕೂಲವಾಗುತ್ತೆ. ಇನ್ನುಳಿದ ಶೇ.30 ತೆರಿಗೆ ಹಣವನ್ನು ಸರ್ಕಾರ ಅಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದರು. ಸಂಘದ ಹಾಲಿ ಅಧ್ಯಕ್ಷ ಮುರಳೀಕೃಷ್ಣ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
10/01/2022 10:54 pm