ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಜಾಗೊಂಡ ಸಾರಿಗೆ ನೌಕರರ ಮರು ನೇಮಕ - ಸಚಿವ ಶ್ರೀರಾಮಯಲು

ಬೆಂಗಳೂರು:ಮುಷ್ಕರದ ವೇಳೆ ವಜಾ ಮಾಡಿರುವ ನಾಲ್ಕೂ ಸಾರಿಗೆ ನಿಗಮಗಳ ಎಲ್ಲ ನೌಕರರನ್ನು ಮತ್ತೆ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ನೌಕರರ ಕೂಟದ ಅಧ್ಯಕ್ಷರಿಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದಾರೆ.

ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರದಲ್ಲಿ ನಿರತರಾದ ಸಾವಿರಾರು ನೌಕರರ ವಿರುದ್ಧ ಶಿಸ್ತು ಕ್ರಮ/ವಜಾಗೊಳಿಸಿರುವ ಪ್ರಕರಣ ಬಗ್ಗೆ ಚರ್ಚೆ ವಿಧಾನ ಸೌಧದಲ್ಲಿ ನಿನ್ನೆ ನಡೆದಿದೆ.

ಸಭೆ ಬಳಿಕ ಸಚಿವರನ್ನು ಭೇಟಿಯಾದ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮತ್ತು ಪದಾಧಿಕಾರಿಗಳಿಗೆ ಇದೇ ಜನವರಿ 9ರಂದು ವಜಾಗೊಂಡಿರುವ ಎಲ್ಲ ನೌಕರರನ್ನು ತೆಗೆದುಕೊಳ್ಳುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ವಜಾಗೊಂಡಿರುವ ನಾಲ್ಕೂ ಸಾರಿಗೆ ನಿಗಮಗಳ 1,600ಕ್ಕೂ ಹೆಚ್ಚು ನೌಕರರಿಗೂ ಇಂದು ಸಚಿವ ಶ್ರೀರಾಮುಲು ಸಿಹಿ ಸುದ್ದಿ ನೀಡಿದ್ದು, ಎಲ್ಲ ನೌಕರರನ್ನು ಮರು ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಾರಿಗೆ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದರು.

Edited By :
Kshetra Samachara

Kshetra Samachara

07/01/2022 02:20 pm

Cinque Terre

488

Cinque Terre

0

ಸಂಬಂಧಿತ ಸುದ್ದಿ