ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ರೈಲ್ವೆ ಅಂಡರ್ ಪಾಸ್ ವೀಕ್ಷಿಸಿದ ಸಚಿವ ಸೋಮಣ್ಣ; ಸಮಸ್ಯೆ ಶೀಘ್ರ ಪರಿಹಾರ ಭರವಸೆ

ದೇವನಹಳ್ಳಿ: ತಾಲೂಕಿನಲ್ಲಿ ಹಾದು ಹೋಗಿರುವ ರೈಲ್ವೆ ಮಾರ್ಗದ ಅಂಡರ್ ಪಾಸ್ ಗಳಲ್ಲಿ ಮಳೆ ಬಂದಾಗ ನೀರು ತುಂಬಿಕೊಂಡು ಗ್ರಾಮಗಳ ನಡುವಿನ ಸಂಪರ್ಕವೇ ಕಡಿತವಾಗುತ್ತವೆ. ಆದ್ದರಿಂದ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರ ಮನವಿಯಂತೆ ಇಂದು ವಸತಿ ಸಚಿವ ವಿ.ಸೋಮಣ್ಣ, ಅಧಿಕಾರಿಗಳ ಜೊತೆ ರೈಲ್ವೆ ಅಂಡರ್ ಪಾಸ್ ಗಳ ವೀಕ್ಷಣೆ ನಡೆಸಿದರು.

ದೇವನಹಳ್ಳಿ ತಾಲೂಕಿನ ಯರ್ತಿಗಾನಹಳ್ಳಿ, ಐವಿಸಿ ರಸ್ತೆ, ಇರಿಗೇನಹಳ್ಳಿ ಗ್ರಾಮಗಳ ಅಂಡರ್ ಪಾಸ್ ಪರಿಶೀಲಿಸಿದ ಅವರು, ಅವೈಜ್ಞಾನಿಕ ಎನ್ನುವ ಬದಲಿಗೆ ಆವತ್ತಿನ ತಂತ್ರಜ್ಞಾನ, ಜನಸಂಖ್ಯೆಗೆ ಅನುಗುಣವಾಗಿ ಸೇತುವೆಗಳ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಸಹ ಗುಣಮಟ್ಟದ ಕಾಮಗಾರಿ ನಡೆಸುತ್ತಾರೆ.

ಮಳೆಯಿಂದ ಆಗುತ್ತಿದ್ದ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದರು.

ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ಬಗ್ಗೆ ಮಾತನಾಡಿದ ಸಚಿವರು, ಇಂದು ಸಂಜೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಾಗುವುದು. ಜ.6ರಂದು ಸಚಿವ ಸಂಪುಟ ಸಭೆ ನಡೆಯಲಿದ್ದು, ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. 1ನೇ ಮತ್ತು 2ನೇ ಅಲೆಯಲ್ಲಿ ಆದ ಅನಾಹುತ 3ನೇ ಅಲೆಯಲ್ಲಿ ಆಗಬಾರದೆಂಬುದು ಸರ್ಕಾರದ ಆಶಯ, ಜನರು ಸಹಕಾರ ನೀಡಬೇಕು ಎಂದರು.

Edited By : Shivu K
Kshetra Samachara

Kshetra Samachara

04/01/2022 02:06 pm

Cinque Terre

786

Cinque Terre

0

ಸಂಬಂಧಿತ ಸುದ್ದಿ