ಬೆಂಗಳೂರು: ನಾವು ಕಾಂಗ್ರೆಸ್ಸು, ಸರ್ದಾರ್ ವಲ್ಲಭ ಭಾಯ್ ಪಟೇಲರ ಫೋಟೋ ಇಡೋದಿಲ್ಲ. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಾಡಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ಮರಣ ದಿನ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನವನ್ನು ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. ಈ ವೇಳೆ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿ ಫೋಟೋ ಮಾತ್ರ ಇಟ್ಟು ಅವರ ಸ್ಮರಣ ದಿನ ಆಚರಿಸಲು ತಯಾರಿ ನಡೆದಿತ್ತು. ವೇದಿಕೆ ಮೇಲೆ ಬಂದು ಕುಳಿತ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಪಟೇಲ್‌ರ ಜನ್ಮದಿನ ಆಚರಣೆ ಬಗ್ಗೆ ಗುಸುಗುಸು ಮಾತುಕತೆ ಆರಂಭವಾಗಿದೆ. ಅದರ ವಿಡಿಯೋ ಈಗ ವೈರಲ್ ಆಗಿದೆ. ಇದು ಒಂದು ವರ್ಷದ ಹಿಂದಿನ ವಿಡಿಯೋ ಎಂಬ ಮಾಹಿತಿ ಇದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ನೋಡಿದ ಕೇಸರಿ ಪಡೆ ಕಾಂಗ್ರೆಸ್ ವಿರುದ್ಧ ಆಕ್ರೋಶಿತವಾಗಿದೆ.
Kshetra Samachara
23/11/2021 04:46 pm