ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈ ಹಿಂದೆ ಸಚಿವರಾಗಿದ್ದಾಗ ಪರ್ಸೆಂಟೇಜ್ ಪಡೆದುಕೊಂಡಿದ್ರಂತೆ. ಅವರದ್ದು ದೊಡ್ಡ ಸ್ಕ್ಯಾಂ ಇದೆಯಂತೆ. ಹೀಗಂತಾ ಸ್ವತಃ ಅವರ ಆಪ್ತರೇ ಮಾತಾಡಿಕೊಂಡಿದ್ದಾರೆ.
ಯೆಸ್.. ಪತ್ರಿಕಾಗೋಷ್ಠಿ ವೇಳೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹಾಗೂ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ನಡುವೆ ಗುಸುಗುಸು ಸಮಾಲೋಚನೆ ನಡೆದಿದೆ. ಅವರು ಆಫ್ ದಿ ರೆಕಾರ್ಡ್ ಮಾತಾಡಿದ್ದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿಬಿಟ್ಟಿದೆ.
6ರಿಂದ 8 ಪರ್ಸೆಂಟ್ ಇದ್ದ ಕಮಿಷನ್ ಅನ್ನು ಡಿಕೆಶಿ 12 ಪರ್ಸೆಂಟೇಜ್ ಗೆ ಹೆಚ್ಚಿಸಿಕೊಂಡಿದ್ರಂತೆ. ಅವರು ಬರೀ ಕಲೆಕ್ಷನ್ ಗಿರಾಕಿ ಅಂತೆ. ಕೆಪಿಸಿಸಿ ಅಧ್ಯಕ್ಷರಾಗಲು ಅವರು ಪಟ್ಟು ಹಿಡಿದಿದ್ದ ವಿ.ಎಸ್ ಉಗ್ರಪ್ಪ ಅವರ ಬುಡಕ್ಕೆ ಡಿಕೆಶಿ ಕೊಳ್ಳಿ ಇಟ್ಟರು ಎಂದು ಇಬ್ಬರೂ ಮಾತಾಡಿಕೊಂಡಿದ್ದಾರೆ.
ಡಿಕೆಶಿ ಹುಡುಗರ ಬಳಿ 50ರಿಂದ 100 ಕೋಟಿ ಇದೆ. ಸಿದ್ದರಾಮಯ್ಯ ಖಡಕ್ ಅಂದ್ರೆ ಖಡಕ್ ಆಗಿ ಮಾತಾಡ್ತಾರೆ. ಡಿಕೆಶಿ ಮಾತಾಡುವಾಗ ತೊದಲುತ್ತಾರೆ ಎಂದು ಸಲೀಂ ಹಾಗೂ ಉಗ್ರಪ್ಪ ಚರ್ಚೆ ಮಾಡಿದ್ದಾರೆ.
Kshetra Samachara
13/10/2021 11:35 am