ಬೆಂಗಳೂರು: ಇಂದು ಬಿಟಿಎಂ ಲೇಔಟ್ ಎರಡನೇ ಹಂತದ ಸೋಮೇಶ್ವರ ಕಾಲೋನಿಯಲ್ಲಿ ಇರುವ ಕರುಮಾರಿಯಮ್ಮ ದೇವಸ್ಥಾನ ಪುನರ್ ನಿರ್ಮಾಣ ಮಾಡುವ ಕಾರ್ಯದ ಗುದ್ದಲಿ ಪೂಜೆ ಮಾಡಲಾಯಿತು. ಇದು ಹಲವಾರು ವರ್ಷಗಳ ಇತಿಹಾಸ ಇರುವಂತಹ ದೇವಸ್ಥಾನವಾಗಿದ್ದು ಈ ರಸ್ತೆಯ ಮೇಲೆ ಮೆಟ್ರೋ ಕಾಮಗಾರಿ ಶುರು ಮಾಡಿದಾಗ ರಸ್ತೆ ಅಗಲೀಕರಣಕ್ಕೆ ದೇವಸ್ಥಾನವನ್ನು ಜಾಗದಿಂದ ಹಿಂದಕ್ಕೆ ತಾತ್ಕಾಲಿಕವಾಗಿ ಸೆಟ್ ನಿರ್ಮಿಸಿ ಇಡಲಾಗಿತ್ತು.
ಇಂದು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾರೆಡ್ಡಿ ಮತ್ತು ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥರೆಡ್ಡಿ ಮತ್ತು ಕಾರ್ಪೊರೇಟರ್ ಜಿ ಮಂಜುನಾಥ್, ಜಿಎನ್ಆರ್ ಬಾಬು ಮತ್ತು ಸ್ಥಳೀಯ ನಿವಾಸಿಗಳು ಗುದ್ದಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
Kshetra Samachara
24/06/2022 01:20 pm