ಹೊಸಕೋಟೆ: ಹೊಸಕೋಟೆಯ ಐತಿಹಾಸಿಕ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಕಳೆದೆರಡೂ ವರ್ಷ ಕೊರೊನಾ ಹಿನ್ನೆಲೆಯಲ್ಲಿ ರಥೋತ್ಸವ ನಡೆದಿರಲಿಲ್ಲ. ಈ ವರ್ಷ ಹಳೆಯ ರಥಕ್ಕೆ ಹೊಸ ಅಲಂಕಾರ ಮಾಡಿದ್ದು ರಥೋತ್ಸವಕ್ಕೆ ಆಕರ್ಷಣೆಯಾಗಿತ್ತು. ಐತಿಹಾಸಿಕ ಅವಿಮುಕ್ತೇಶ್ವರ ದೇವರಿಗೆ ಶಾಸಕ ಶರತ್ ಬಚ್ಚೇಗೌಡ, ಸಚಿವ MTB. ನಾಗರಾಜ್ ಹಾಗೂ ತಹಶೀಲ್ದಾರ್ ಮಹೇಶ್ ಕುಮಾರ್ ರವರು ದೇವರಿಗೆ ಪೂಜೆ ಸಲ್ಲಿಸಿದ ನಂತರ ರಥವನ್ನು ಎಳೆಯಲಾಯ್ತು. ಈ ವೇಳೆ ಸಾವಿರಾರು ಮಂದಿ ಪಾಲ್ಗೊಂಡು, ರಥವನ್ನೆಳೆದು ದೇವರಿಗೆ ಪೂಜೆ ಸಲ್ಲಿಸಿದ್ರು..
ಬ್ರಹ್ಮರಥೋತ್ಸವಕ್ಕೆ ಬೆಂಗಳೂರು, ಕೋಲಾರ, ಮಾಲೂರು ತಮಿಳುನಾಡಿನ ಹೊಸೂರು ಗಡಿ ಭಾಗಗಳಿಂದ 1 ಲಕ್ಷ ಜನ ಆಗಮಿಸಿದ್ದು ಜಾತ್ರೆಯ ಮಹತ್ವ ಸಾರುವಂತಿತ್ತು. ಬಂದ ಜನರಿಗೆ ಅನ್ನದಾನದ ವ್ಯವಸ್ಥೆ ಇತ್ತು. ಇನ್ನು ಇದೇ ವೇಳೆ ಮಾತನಾಡಿದ MTB ನಾಗರಾಜ್ ಮುಂಬರುವ 2023 ರ ಚುನಾವಣೆಯಲ್ಲಿ BJP ಪಕ್ಷ 150 ಸೀಟು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ವಿಜೃಂಭಣೆಯಿಂದ ನಡೆದ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾವಿರಾರು ಜನ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ರಥೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡ ಹೊಸಕೋಟೆ ಪೊಲೀಸರಿಗೊಂದು ನಮನ..
ಸುರೇಶ್ ಬಾಬು.. ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..
PublicNext
17/05/2022 09:32 am