ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ದಲಿತರಿಗೆ ಅಗೌರವ

ದೊಡ್ಡಬಳ್ಳಾಪುರ: ವೇದಿಕೆಯಲ್ಲಿ ದಲಿತ ಮುಖಂಡರನ್ನು ಕೂರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಟಿ ವೆಂಕಟರಮಣಯ್ಯ ಅಗೌರವ ತೋರಿದರೆಂಬ ಕಾರಣಕ್ಕೆ ದಲಿತ ಮುಖಂಡರು ಸಭೆಯನ್ನ ಬಾಯ್ಕಾಟ್ ಮಾಡಿ ಹೊರ ನಡೆದರು.

ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಕಚೇರಿ ಸಂಭಾಗಣದಲ್ಲಿ ತಹಶೀಲ್ದಾರ್ ಮೋಹನ ಕುಮಾರಿ ನೇತೃತ್ವದಲ್ಲಿ ಇಂದು ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಜಯಂತಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಶಾಸಕ ಟಿ ವೆಂಕಟರಮಣಯ್ಯ ಸೇರಿದಂತೆ ಹಲವು ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಸಭೆಯ ವೇದಿಕೆಯಲ್ಲಿ ದಲಿತ ಸಮಾಜದ ಪ್ರತಿನಿಧಿಯೊಬ್ಬರಿಗೆ ಅವಕಾಶ ನೀಡುವಂತೆ ಮುಖಂಡರು ಮನವಿ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ವೆಂಕಟರಮಣಯ್ಯ, ಮುಖಂಡರು ವೇದಿಕೆಯಲ್ಲಿ ಕೂರುವಂತಿಲ್ಲ. ಏನಿದ್ದರೂ ಅಲ್ಲಿಯೇ ಕುಳಿತುಕೊಳ್ಳಿ ಎಂದು ಏರುದನಿಯಲ್ಲಿ ಹೇಳಿದರು.

ಶಾಸಕರ ಮಾತಿನಿಂದ ರೊಚ್ಚಿಗೆದ್ದ ಮುಖಂಡರು ವಾಗ್ವಾದಕ್ಕೆ ಇಳಿದರು. ದಲಿತರಿಂದ 5 ಅಡಿ ಅಂತರ ಕಾಯ್ದುಕೊಳ್ಳುವಂತೆ ಹೇಳುತ್ತೀರಿ. ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವವರು ನೀವಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿ ಹೊರನಡೆದರು.

ಪೂರ್ವಭಾವಿ ಸಭೆ ಗೊಂದಲದ ಗೂಡಾಗಿ ಪರಿಣಮಿಸಿದ್ದರಿಂದ ಸಭೆಯನ್ನು ತಹಶೀಲ್ದಾರ್ ಏಪ್ರಿಲ್ 4ಕ್ಕೆ ಮುಂದೂಡಿದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಕೆಲವರು ಬೇಕೆಂತಲೇ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ನಾನು ಶಾಸಕನಾದ ಮೇಲೆಯೇ ಅಂಬೇಡ್ಕರ್ ಭವನ ಹಾಗೂ ಬಾಬು ಜಗಜೀವನರಾಂ ಭವನಕ್ಕೆ ಸಾಕಷ್ಟು‌ ಅನುದಾನ ತಂದಿದ್ದೇನೆ. ಆದರೆ, ಕೆಲವರು ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

Edited By : Shivu K
PublicNext

PublicNext

01/04/2022 11:13 pm

Cinque Terre

22.83 K

Cinque Terre

3

ಸಂಬಂಧಿತ ಸುದ್ದಿ