ಬೆಂಗಳೂರು: ಕೆ.ಆರ್. ಪುರದ ರಾಮಮೂರ್ತಿ ನಗರ ಸಮೀಪದ ವಿಜಿನಾಪುರದಲ್ಲಿ ನವನಿರ್ಮಾಣವಾದ ಶ್ರೀ ಶನೇಶ್ವರ ದೇವಸ್ಥಾನವನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವರು, ಕೆ.ಆರ್.ಪುರ ಕ್ಷೇತ್ರದಲ್ಲಿ ಹಲವು ದೇವಸ್ಥಾನಗಳು ಜೀರ್ಣೋದ್ಧಾರವಾಗಿವೆ. ದಾನಿಗಳ ನೆರವಿನಿಂದ ಹಾಗೂ ವೈಯಕ್ತಿಕವಾಗಿ ಬಹಳಷ್ಟು ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ದೇವಸ್ಥಾನ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಶ್ರೀ ಶನೇಶ್ವರ ಸ್ವಾಮಿಗೆ ಮುಂಜಾವದಿಂದ ವಿವಿಧ ಧಾರ್ಮಿಕ ವಿಧಿವಿಧಾನ, ಮಹಾಮಂಗಳಾರತಿ, ಅಭಿಷೇಕ ಜರುಗಿತು. ರಾಮಮೂರ್ತಿ ನಗರ, ವಿಜಿನಾಪುರ, ಕೆ.ಆರ್.ಪುರ, ಕಸ್ತೂರಿ ನಗರ ಸೇರಿದಂತೆ ನಾನಾ ಕಡೆಗಳಿಂದ ಭಕ್ತಾದಿಗಳು ದೇವರ ದರ್ಶನ ಪಡೆದರು. ಬಳಿಕ ಅನ್ನದಾನ ಜರುಗಿತು. ಸಚಿವರಿಗೆ ಬಿಜೆಪಿ ಬೆಂಗಳೂರು ನಗರ ಜಿಲ್ಲಾ ಉತ್ತರ ವಿಭಾಗದ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಾಕ್ಸರ್ ನಾಗರಾಜ್ ಸಾಥ್ ನೀಡಿದರು.
Kshetra Samachara
10/12/2021 09:37 pm