ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭಾರತವನ್ನ ಜೋಡಿಸಲು ರಾಹುಲ್ ಗಾಂಧಿ ಪಾದಯಾತ್ರೆ ಮಾಡ್ತಿದ್ದಾರೆ; ಡಿಕೆಶಿ

ಯುವಕರ ಧ್ವನಿ ಡಿಕೆ ಶಿವಕುಮಾರ್ ಆಗಬೇಕು ಅಂತ ಈ ಕಾರ್ಯಕ್ರಮ ರೂಪಿಸಿದ್ದೇವೆ. ಭಾರತವನ್ನ ಜೋಡಿಸಲು ನಮ್ಮ ನಾಯಕ ರಾಹುಲ್ ಗಾಂಧಿಯವರು ಪಾದಯಾತ್ರೆ ಮಾಡ್ತಿದ್ದಾರೆ. ನಮ್ಮ ರಾಜ್ಯಕ್ಕೆ ಸೆಪ್ಟೆಂಬರ್ 31ಕ್ಕೆ ಯಾತ್ರೆ ಬರುತ್ತೆ .ರಾಹುಲ್ ಗಾಂಧಿಯವರ ಮುಂದೆ ಯುವಕರು ಬಂದು ಉದ್ಯೋಗ ಸಮಸ್ಯೆ ಮತ್ತು ನಿವಾರಣೆಗೆ ಮಾಡಬೇಕಾದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಅವಕಾಶ ಮಾಡಿಕೊಡ್ತೀವಿ. ದೇಶದಲ್ಲಿ ಯುವಶಕ್ತಿ ಇಂದು ರಾಹುಲ್ ಗಾಂಧಿಯವರ ಜೊತೆ ಇದೆ ಎಂದು ನಲಪಾಡ್‌ಗೆ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

ರಾಹುಲ್ ಗಾಂಧಿ ೧೦ ಲಕ್ಷದ ಸೂಟ್ ಹಾಕಿಲ್ಲ ಅಲ್ವಾ?ಅವರು ಏನು ಹಾಕಬೇಕು ಅನ್ನೋದು ಅವರ ಚಾಯ್ಸ್‌ ನನ್ನ ಹತ್ರಾನು ೨ ಲಕ್ಷದ ರೋಲೆಕ್ಸ್ ವಾಚ್ ಇದೆ, ಈಗ ಅದರ ವ್ಯಾಲ್ಯೂ ೩೦ ಲಕ್ಷ ಇರಬಹುದು. ನಾನು ಹಾಕ್ತಿರೋದು ಬಾಟಾ ಚಪ್ಪಲಿ, ೯೦೦ ರೂ. ಮಾತ್ರ ಅದು ನನ್ನ ಸ್ವಂತ ದುಡ್ಡಲ್ಲಿ ತಗೊಂಡಿದ್ದು ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ಕಿಡಿಕಾರಿದ್ದಾರೆ.

Edited By :
PublicNext

PublicNext

10/09/2022 05:07 pm

Cinque Terre

31.3 K

Cinque Terre

3

ಸಂಬಂಧಿತ ಸುದ್ದಿ