ಸ್ವಾತಂತ್ರ್ಯೋತ್ಸವ ಹತ್ತಿರ ಬರುತ್ತಿದ್ದಂತೆ ರಾಷ್ಟ್ರಧ್ವಜವನ್ನ ಮುಂದಿಟ್ಟುಕೊಂಡು ಕೆಲ ರಾಜಕೀಯ ನಾಯಕರು ಒಬ್ಬರ ಮೇಲೆ ಮತ್ತೊಬ್ಬರು ಆರೋಪ, ಪ್ರತ್ಯಾರೋಪಗಳ ಸುರಿಮಳೆಗೆ ಮುಂದಾಗಿದ್ದಾರೆ.
"ಸ್ವಾತಂತ್ರ್ಯೋತ್ಸವ ಯಾರ ಒಬ್ಬರ ಯಾವ ಪಕ್ಷದ ಸ್ವತ್ತು ಅಲ್ಲ" ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತ್ಯುತ್ತರ ನೀಡಿದ್ದಾರೆ. 'ಸ್ವಾತಂತ್ರ್ಯೋತ್ಸವ ಒಂದೇ ಪಾರ್ಟಿಗೆ ಸಂಬಂಧಿಸಿದ್ದು ಅಂತ ನಾವು ಹೇಳಿದ್ದಲ್ಲ. ನಮ್ಮ ಪಕ್ಷಕ್ಕೆ ಒಂದು ಇತಿಹಾಸ ಇದೆ. ನಮ್ಮ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ಕೊಟ್ಟಿದ್ದಾರೆ ಅಂತ ಹೇಳಿದ್ದು, ಬೇರೆ ಏನು ಹೇಳಿಲ್ಲ. ಅವರೂ ಒಂದಿಷ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ. ಅದಕ್ಕೆ ನಾವು ವಿರೋಧ ವ್ಯಕ್ತಪಡಿಸಿದಿವಾ? ನಾವು ಇಂತಹ ವಿಚಾರಕ್ಕೆ ಟೀಕೆ ಮಾಡುವಷ್ಟು ಮೂರ್ಖರಲ್ಲ. ನಾವು ತಕರಾರು ಮಾಡಿದ್ದು ಧ್ವಜವನ್ನೂ ಮಾರಾಟ ಮಾಡಬೇಡಿ ಎನ್ನುವ ವಿಚಾರಕ್ಕೆ ಅಷ್ಟೇ ಎಂದು ಡಿಕೆ ಶಿವಕುಮಾರ್ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೂ ಬಿಜೆಪಿಯವರು ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರ ಧ್ವಜ ಹಾರಿಸಿದ್ದು ಬಹಳ ಸಂತೋಷದ ವಿಷಯ. ದೇಶದ ಮೇಲೆ ಈಗಲಾದ್ರು ಗೌರವ ಬಂದಿದೆ ಅಲ್ವಾ ಇದಕ್ಕೆ ಖುಷಿ ಪಡೋಣ. ಅದರಲ್ಲಿ ರಾಜಕೀಯ ಮಾಡುವುದು ಬೇಡ. ಶಿಕ್ಷಣ ಸಚಿವರು ಅವರ ಧ್ವಜವನ್ನು ಕೆಳಗೆ ಹಾರಿಸಿ ಭಗವಾಧ್ವಜವನ್ನ ಹಾರಿಸಿದ್ದಾರೆ. ಇಂತವರು ಬಿಜೆಪಿಯಲ್ಲಿ ಇದಾರೆ ಎಂದು ಸದಾಶಿವ ನಗರದ ಸರ್ಕಾರಿ ನಿವಾಸದಲ್ಲಿ ಡಿಕೆಶಿ ಹೇಳಿದ್ದಾರೆ.
PublicNext
13/08/2022 06:57 pm