ಬೆಂಗಳೂರು : ಕ್ರಿಮಿನಲ್ ಕೇಸ್ ನಲ್ಲಿ ಭಾಗಿಯಾದವರನ್ನು ಕಾರ್ಯಕಾರಿಯಲ್ಲದ ಹುದ್ದೆಗೆ ವರ್ಗಾವಣೆ ಮಾಡಲಾಗುತ್ತೆ ಎಂಬ ಮಹತ್ವವಾದ ತೀರ್ಮಾನವನ್ನ ಶಿಕ್ಷಣ ಸಚಿವ ಬಿಸಿ ನಾಗೇಶ್ ತೆಗೆದುಕೊಂಡಿದ್ದಾರೆ.
ಒಟ್ಟು 33 ಅಧಿಕಾರಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬಿಸಿ ಮುಟ್ಟಿಸಿದ್ದಾರೆ. ಕಾರ್ಯಕಾರಿ
ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಅಧಿಕಾರಿಗಳ ವಿರುದ್ಧ, ಇಲಾಖೆ ವಿಚಾರಣೆ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಪ್ರಾರಂಭ ಮಾಡಿದ್ದರೇ ಅಥವಾ ದಂಡನೆಗೆ ಒಳಪಡಿಸಿದರೆ, ಅಂತವರನ್ನು ಕಾರ್ಯಕಾರಿಯಲ್ಲದ ಹುದ್ದೆಗೆ ವರ್ಗಾವಣೆ ಮಾಡಲಾಗುವ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಬಿಇಓ, ಡಿಡಿಪಿಐ ಮೇಲೆ ಇಲಾಖೆ ವಿಚಾರಣೆ ಇದೆ. ಅಂತಹವರಿಗೆ ಎಗ್ಸಿಸ್ಟಿಂಗ್ ಪೋಸ್ಟ್ ಕೊಡಬಾರದು ಎಂದು ತೀರ್ಮಾನ ಮಾಡಿದ್ದೇವೆ .ಅದನ್ನು ಜುಲೈ ನಲ್ಲಿ ಡಿಸೈಡ್ ಮಾಡಿದ್ವಿ, ಆಗಸ್ಟ್ ನಲ್ಲಿ ಫೈಲ್ ಆಗಿದೆ. ಅದನ್ನು ಸಿಎಂ ಗೆ ಕಳಿಸಿದ್ವಿ ಆಗಸ್ಟ್ 10 ಕ್ಕೆ ಕ್ಲಿಯರ್ ಮಾಡಿದ್ರು. ಇದನ್ನೂ ಎಫೆಕ್ಟಿವ್ ಆಗಿ ತಂದಿದ್ದೇವೆ .ಇಲಾಖೆ ವಿಚಾರಣೆ ನಡೆಸುವಾಗ ಅವರಿಗೆ ಪೋಸ್ಟ್ ಕೊಡುವುದು ಸರಿಯಲ್ಲ. ವಿಚಾರಣೆ ಇದೆ ಅಂತ ಗೊತ್ತಾಗಿದೆ ಅದನ್ನು ಸರಿ ಮಾಡುತ್ತಿದ್ದೇವೆ. ಆರೋಪ ಮುಕ್ತರಾಗಿ ಬರುವವರೆಗೂ ಈ ರೀತಿಯ ಪೋಸ್ಟ್'ನಲ್ಲಿ ಇರುವಂತಿಲ್ಲ. ಸರ್ಕಾರದ ಸೌಲಭ್ಯ ಕಟ್ ಆಗಲ್ಲ, ವಿಚಾರಣೆ ನಿಜ ಅಥವಾ ಸುಳ್ಳು ಅಂತ ಗೊತ್ತಾದಾಗ ಎಲ್ಲಾ ತೀರ್ಮಾನ ಮಾಡುತ್ತೇವೆ ಎಂದು ಬಿಸಿ ನಾಗೇಶ್ ಹೇಳಿದ್ದಾರೆ.
PublicNext
09/09/2022 07:51 pm