ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: BMTCಯಲ್ಲಿ ಇದೆಂತಹ ಅನ್ಯಾಯ!; ಅಧಿಕಾರಿಗಳ ಕಣ್ಣಿಗೆ ಬೆಣ್ಣೆ, ಕಾರ್ಮಿಕ ಸಿಬ್ಬಂದಿಗೆ ಸುಣ್ಣ ನಾ ?

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಡೆಯುತ್ತಿರುವುದು “ಅಂಧ ದರ್ಬಾರ್” ..? ಈ ರೀತಿಯ ಅನುಮಾನ ಈ ಘಟನೆಯಿಂದ ಭಾಸವಾಗುತ್ತದೆ. ಹೌದು...ಸದಾ ಅಧಿಕಾರಿಗಳ ಪರವಾಗೇ ನಿಲ್ಲುವ ಆಡಳಿತ ವರ್ಗ ಕಾರ್ಮಿಕರನ್ನು ಕಾಲಕಸದಂತೆ ಟ್ರೀಟ್ ಮಾಡ್ತಿದೆ ಅನ್ನೋದಕ್ಕೆ ಇದು ತಾಜಾ ಉದಾಹರಣೆ .

ಅಧಿಕಾರಿಗಳು ಕೋಟಿಗಳಲ್ಲಿ ಭ್ರಷ್ಟಾಚಾರ ಮಾಡಿದ್ದಕ್ಕೆ ಕಣ್ಣಿಗೆ ರಾಚುವಂಥ ಸಾಕ್ಷ್ಯಗಳಿದ್ದರೂ ಅದಕ್ಕೆ ತೇಪೆ ಹಚ್ಚೋ ಕೆಲಸ ನಡೆಯುತ್ತದೆ. ಅದೇ ಡ್ರೈವರ್-ಕಂಡಕ್ಟರ್ಸ್ ಪ್ರಜ್ಞಾಪೂರ್ವಕವಾಗಿ ತಪ್ಪೆಸಗದಿದ್ದರೂ ಅವರನ್ನು ಅಮಾನತ್ತಿನಲ್ಲಿಡುವ ಅಥವಾ ವಜಾಗೊಳಿಸಲಾಗುತ್ತದೆ.

7 ವರ್ಷಗಳ ಹಿಂದೆ ಅಂದ್ರೆ 07/12/2015 ರಂದು ಘಟಕ 9ರಲ್ಲಿ ವೇಣುಗೋಪಾಲ್ ಎಂಬವರು ಕಾರ್ಯನಿರ್ವಹಿಸುತ್ತಿದ್ದರು. ಅವತ್ತಿಗೆ ನಡೆದ ಮುಷ್ಕರದಲ್ಲಿ ಈ ವೇಣುಗೋಪಾಲ್ ಘಟಕದ ಚಾಲಕ-ನಿರ್ವಾಹಕರನ್ನು ಒಟ್ಟುಗೂಡಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಮಾಡಿರುತ್ತಾರೆ. ಅದು ಅವತ್ತಿಗೆ ಚರ್ಚೆಯಾಗಿ ಮರೆತೇ ಹೋಗಿರುತ್ತದೆ. ಆದ್ರೆ ಆಡಳಿತ ವರ್ಗ ಎಷ್ಟರ ಮಟ್ಟಿಗೆ ಜಿದ್ದಿಗೆ ಬಿದ್ದಿರುತ್ತದೆ ಎಂದ್ರೆ ಆ ದಿನ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿದ್ದ ಕೆ.ಎಂ. ಮುನಿಕೃಷ್ಣ ಚಾಲಕ ವೇಣುಗೋಪಾಲ್ ವಿರುದ್ಧ ಸಲ್ಲಿಸಿದ್ದ ವರದಿ 2022ರ ಜುಲೈ 1 ರಂದು ಚಾಲ್ತಿಗೆ ಬಂದುಬಿಟ್ಟಿದೆ.

ಈ ರಿಪೋರ್ಟ್ ಪ್ರಕಾರ ವೇಣುಗೋಪಾಲ್, ಒಟ್ಟು 57 ಟ್ರಿಪ್ ಗಳಲ್ಲಿ 37 ಟ್ರಿಪ್ ಗಳು ತಡವಾಗಿ ಆಚರಣೆಯಾಗಿದ್ದರಿಂದ ಸಂಸ್ಥೆಗೆ ಆ ದಿನ 21,660 ರೂ ನಷ್ಟವಾಗಿದೆ. ಇದೊಂದು ಗಂಭೀರ ಆಪಾದನೆಯಾಗಿದ್ದು ಸಂಸ್ಥೆಗೆ ಅಪಾರ ಪ್ರಮಾಣದ ನಷ್ಟವಾಗಿರುವುದಕ್ಕೆ ವೇಣುಗೋಪಾಲ್ ರನ್ನು ಸೇವೆಯಿಂದಲೇ ವಜಾ ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಚಂದ್ರಶೇಖರ್ ಆದೇಶ ಹೊರಡಿಸಿದ್ದಾರೆ.

ಇನ್ನು ‌ಇದು 20-07-2005 ರಿಂದ 13-08-2006 ರ ಅವಧಿಯಲ್ಲಿ ಬಿಎಂಟಿಸಿಯಲ್ಲಿ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದವರೇ ಎಚ್.ಕೆ .ರಮಾಮಣಿ. ಕಾರ್ಮಿಕರ ಭವಿಷ್ಯ ನಿಧಿ ಹಣದ ವಿನಿಮಯದಲ್ಲಿ ಸಾಕಷ್ಟು ಲೋಪ ಎಸಗಿರುವ ಆಪಾದನೆ ರಮಾಮಣಿ ವಿರುದ್ದ ಕೇಳಿಬಂದಿತ್ತು.

2004 ರಲ್ಲಿ 31,61,000, 2005 ರಲ್ಲಿ 56,09,360 ರೂ,2006 ರಲ್ಲಿ 1,00,03,530 ರೂ ಒಟ್ಟು 3 ವರ್ಷಗಳಲ್ಲಿ 1 ಕೋಟಿ 87 ಲಕ್ಷದ 73 ಸಾವಿರ ರೂ. ನಷ್ಟು ದುರುಪಯೋಗವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ವರದಿ ನೀಡಿದ್ದರು. ಕೋಟ್ಯಂತರ ದುರುಪಯೋಗ ಮಾಡಿದ್ದಾರೆನ್ನುವ ಗಂಭೀರ ಆಪಾದನೆ ಹೊರತಾಗಿಯೂ ರಮಾಮಣಿ ವಿರುದ್ಧ ಕೈಗೊಂಡ ಕ್ರಮ ಶೂನ್ಯ!

ಇದಿಷ್ಟೇ ಅಲ್ಲ, 2004, 2005, 2006, 2007ರಲ್ಲಿ 71 ಸದಸ್ಯರ ಭವಿಷ್ಯನಿಧಿ ಖಾತೆಯಲ್ಲಿ ವಿಮೆ ಹಣಕ್ಕಿಂತ ಹೆಚ್ಚುವರಿಯಾಗಿ 18 ಲಕ್ಷದ 90 ಸಾವಿರದ 220 ರೂಗಳನ್ನು ಪಾವತಿಸಿರುವುದನ್ನು ಪತ್ತೆ ಮಾಡಲಾಗಿತ್ತು. ಮೇಲ್ಕಂಡ ಪ್ರಕರಣದಲ್ಲಿ ಲೆಕ್ಕಪತ್ರ ಮೇಲ್ವಿಚಾರಕಿ ಪ್ರೇಮಲತಾ ಮತ್ತು 18 ಪ್ರಕರಣಗಳಲ್ಲಿ 03,30,091 ರೂ.ಗಳ ಹೆಚ್ಚುವರಿ ಪಾವತಿ ಆಪಾದನೆಯಲ್ಲಿ ಕಿರಿಯ ಸಹಾಯಕಿ ಪ್ರಮೀಳಾ ಮೇಲೆ ಗಂಭೀರ ಆಪಾದನೆ ಕೇಳಿಬಂದಿತ್ತು.

ಆದರೆ, ಅವರಿಗೆ ಆದ ಶಿಕ್ಷೆ ಏನು ಎನ್ನುವುದನ್ನು ಒನ್ಸ್ ಅಗೈನ್ ಶಿಸ್ತುಪಾಲನಾಧಿಕಾರಿಗಳೇ ವಿವರಿಸಬೇಕಾಗುತ್ತದೆ. ಮೇಲ್ಕಂಡ ಆಪಾದನೆ ಹೊತ್ತ ಹೊರತಾಗಿಯೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಶಿಸ್ತುಪಾಲನಾಧಿಕಾರಿಗಳ ಕಾರ್ಯವೈಖರಿಯೇ ಇವತ್ತು ಪ್ರಶ್ನೆಗೀಡಾಗಿದೆ. ಗಂಭೀರ ಆಪಾದನೆ ಹೊತ್ತಂತ ರಮಾಮಣಿ, ಹೇಮಲತಾ, ಪ್ರೇಮಲತಾ, ಜಯರಾಮ್, ಅಜಯ್, ಪ್ರಮೀಳಾ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ. ಆದರೆ, ಕಾರ್ಮಿಕರಿಗೆ ಮಾತ್ರ ವಜಾ ಭಾಗ್ಯ ಯಾಕೇ? ಎಂಬುದು ಸಾರಿಗೆ ನಿಗಮ ಕಾರ್ಮಿಕರ ಅಳಲು.

Edited By : Somashekar
PublicNext

PublicNext

05/07/2022 08:44 pm

Cinque Terre

72.26 K

Cinque Terre

0

ಸಂಬಂಧಿತ ಸುದ್ದಿ