ಬೆಂಗಳೂರು : ನಗರದಲ್ಲಿ ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿ.ಕೆ ಪಾಳ್ಯದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಸುಮಾರು 30 ಗುಂಟೆ ಸರ್ಕಾರಿ ರಾಜಕಾಲುವೆ ಜಾಗವನ್ನ ಒತ್ತುವರಿ ಮಾಡಿಕೊಂಡಿದ್ದರು.
ಆ ಜಾಗವನ್ನು ಸರ್ವೆ ನಂಬರ್ 209 , 210,240,204,203,221, ಇದರ ಮಧ್ಯೆ ಹಾದು ಹೋಗುವ 30 ಅಡಿ ರಾಜಕಾಲುವೆಯನ್ನು ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಸರ್ವೆ ಡಿಪಾರ್ಟ್ಮೆಂಟ್ ಅಧಿಕಾರಿಗಳು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆಯನ್ನು ಮಾಡಿ ಪಂಚಾಯಿತಿ ವಶಕ್ಕೆ ಇಂದು ಪಡೆದುಕೊಂಡರು.
ಇನ್ನು ಸಿಕೆ ಪಾಳ್ಯದಲ್ಲಿ 30 ಅಡಿಗಳ ರಾಜಕಾಲುವೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಸರಿ ಸುಮಾರು 1.50 ಕೋಟಿ ಮೌಲ್ಯದ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಂಟಪ ಗ್ರಾಮ ಉಪಾಧ್ಯಕ್ಷ ಪಂಚಾಯತ್ ಉಪಾಧ್ಯಕ್ಷ ಚೌಡಪ್ಪ ತಿಳಿಸಿದರು.
Kshetra Samachara
28/02/2022 09:27 pm