ಬೆಂಗಳೂರು: ಕರಾವಳಿಯಲ್ಲಿ ಸರಣಿ ಕೊಲೆ ಹಿನ್ನೆಲೆ ಬಿಜೆಪಿಯಲ್ಲಿ ಕಾರ್ಯಕರ್ತರಲ್ಲಿ ಸಹನೆ ಕಟ್ಟೆ ಒಡೆದು ಆಕ್ರೋಶದ ಕಿಚ್ಚು ಹೆಚ್ಚಾಗಿದೆ. ಇದೇ ಕಾರಣಕ್ಕೆ ಎಬಿವಿಪಿ ಕಾರ್ಯಕರ್ತರು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಮೇಲೆ ಮುತ್ತಿಗೆ ಹಾಕಿದ್ರು. ಇದ್ರಿಂದ ಬೆಂಗಳೂರು ಪೊಲೀಸ್ರು ಕೂಡ ಪೇಚಿಗೆ ಸಿಲುಕಿದ್ರು.
ಇನ್ನು, ಇದೇ ಸಮಸ್ಯೆಗೆ ಪರಿಹಾರ ಸೂಚಿಸಲು ಮತ್ತು ಮಾಹಿತಿ ಪಡೆಯಲು ಖುದ್ದು ಬಿಜೆಪಿ ವರಿಷ್ಠ, ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಬಂದಿದ್ದಾರೆ. ಈ ಹಿನ್ನಲೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಅಮಿತ್ ಷಾಗೆ ಭಾರಿ ಭದ್ರತೆ ನೀಡಿದ್ದಾರೆ. ಕಾರ್ಯಕರ್ತರು ಅಮಿತ್ ಷಾ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಸದಂತೆ ಹಾಗೂ ಕಪ್ಪು ಬಾವುಟ ತೋರಿಸಿ ಧಿಕ್ಕಾರ ಕೂಗದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ರಾಜ್ಯ ಗೃಹ ಸಚಿವರಿಗೆ ಆದ ರೀತಿ ಕೇಂದ್ರ ಗೃಹ ಸಚಿವರಿಗೂ ಆಗದಂತೆ ಎಚ್ಚರಿಕೆ ವಹಿಸಿದ್ದು, ಅಮಿತ್ ಷಾ ಗೆ ಝಡ್ ಪ್ಲಸ್ ಭದ್ರತೆ ಇದ್ರೂ ಬೆಂಗಳೂರು ಪೊಲೀಸರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ತಾಜ್ ವೆಸ್ಟ್ ಆಂಡ್ ಸುತ್ತಮುತ್ತ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಹೋಟೆಲ್ ಸುತ್ತಮುತ್ತ 2500 ಪೊಲೀಸರು ನಿಯೋಜನೆಯಾಗಿದ್ದಾರೆ.
ಭದ್ರತೆಗಾಗಿ 7 ಮಂದಿ ಡಿಸಿಪಿ, 18 ಎಸಿಪಿ, 53 ಇನ್ಸ್ ಪೆಕ್ಟರ್, 147 ಸಬ್ ಇನ್ಸ್ ಪೆಕ್ಟರ್, 180 ಎಎಸ್ ಐ, 1162 ಹೆಡ್ ಕಾನ್ಸ್ ಟೇಬಲ್, 15 ಕೆಎಸ್ ಆರ್ ಪಿ ಬೆಟಾಲಿಯನ್ ನಿಯೋಜಿಸಲಾಗಿದೆ.
PublicNext
04/08/2022 04:14 pm