ಬೆಂಗಳೂರು: ಕಾಂಗ್ರೆಸ್ ಮುಖಂಡ ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತೆ ನೋಟೀಸ್ ನೀಡಿದೆ.
ಆಗಸ್ಟ್ 1ರಂದು ವಿಚಾರಣೆಗೆ ಹಾಜರಾಗುವಂತೆ ಸಾವಿರಾರು ಕೋಟಿ ಒಡೆಯ ಕೆಜಿಎಫ್ ಬಾಬುಗೆ ಸದೆಹಲಿ ಇ.ಡಿ ಅಧಿಕಾರಿಗಳು ನೋಟೀಸ್‌ನಲ್ಲಿ ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಪರಿಷತ್ ಚುನಾವಣೆಗೂ ಮುನ್ನ ಕೆಜಿಎಫ್ ಬಾಬು ಅವರು ಇ.ಡಿ ವಿಚಾರಣೆಗೆ ಒಳಪಟ್ಟಿದ್ದರು. ಈ ವೇಳೆ ಪರಿಷತ್ ಚುನಾವಣೆ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಕೇಳಿದ್ದರು.
ಮೇ 28 ರಂದು ನಡೆದ ಇ.ಡಿ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಈ ಹಿಂದೆ ಕೆಜಿಎಫ್ ಬಾಬುಗೆ ಸಮನ್ಸ್ ನೀಡಲಾಗಿತ್ತು. ಈಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
PublicNext
28/07/2022 10:09 pm