ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆಹಾನಿ ಪ್ರದೇಶ ಪರಿಶೀಲಿಸಿದ ತೇಜಸ್ವಿ ಸೂರ್ಯ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ರಸ್ತೆಗಳು ಕೆರೆಯಂತಾಗಿದ್ದವು. ಮನೆಗಳಿಗೆಲ್ಲ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ದಕ್ಷಿಣ ಬೆಂಗಳೂರಿನಲ್ಲಿ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ತೇಜಸ್ವಿ ಸೂರ್ಯ 'ನಮ್ಮ ಕ್ಷೇತ್ರದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಸಮಸ್ಯೆ ಎಲ್ಲೆಲ್ಲಿ ಆಗಿದೆ ನೋಡಿ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳು ಹಗಲು ರಾತ್ರಿ ಎನ್ನದೇ ಕಣ್ಣಿಗೆ ಎಣ್ಣೆ ಹಾಕಿಕೊಂಡು ಕೆಲಸ ಮಾಡ್ತಿದ್ದಾರೆ.

ಇನ್ನು, ನಗರದಲ್ಲಿ ಕೆರೆಗಳ ಒತ್ತುವಾರಿ ವಿಚಾರದ ಬಗ್ಗೆ ಮಾತನಾಡಿದ ಸಂಸದರು "ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೆರೆ ಒತ್ತುವರಿ ಆಗಿದ್ದೆಯೋ ಅಂತಹ ಪ್ರದೇಶಗಳನ್ನ ನಿರ್ದಾಕ್ಷಿಣ್ಯವಾಗಿ ಕ್ಲೀನ್ ಮಾಡಬೇಕೆಂದು ಆಗ್ರಹಿಸಿದರು. ಇದೇ ವೇಳೆ ಮಾತನಾಡಿದ ಅವರು "ಕೆಲ ಪ್ರದೇಶಗಳಲ್ಲಿ ಸರ್ಕಾರವೇ ಒತ್ತುವಾರಿ ಮಾಡಿದೆ. ಬಿಡಿಎ, ಕೆಐಎಡಿಬಿಯ ಲೇಔಟ್‌ಗಳಲ್ಲಿ ಸರ್ಕಾರ ಒತ್ತುವಾರಿ ಮಾಡಿದೆ. ಅದರ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಆಗಿರುವ ಸಮಸ್ಯೆಯನ್ನು ಸರ್ಕಾರ ಬಗೆಹರಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಬೆಳ್ಳಂದೂರು ಹಾಗೂ ಮಹದೇವಪುರದಲ್ಲಿ ಐದು ಪರ್ಸೆಂಟ್‌ನಷ್ಟು ಮಳೆ ಹಾನಿ ಆಗಿದೆ. ಆದರೆ ಇಡೀ ಬೆಂಗಳೂರು ನೀರಲ್ಲಿ ಮುಳುಗಿ ಹೋಗಿದೆ ಎನ್ನುವುದು ಸರಿಯಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಬ್ರಾಂಡ್ ಬೆಂಗಳೂರು ಲಕ್ಷಾಂತರ ಜನರಿಗೆ ಊಟ, ಜೀವನ ಕೊಟ್ಟಿದೆ. ರಾಜಕೀಯ ಲಾಭಕ್ಕಾಗಿ ಬೆಂಗಳೂರನ್ನು ಅಪಮಾನ ಮಾಡುವುದು ಸರಿಯಲ್ಲ. ಕರ್ನಾಟಕಕ್ಕೆ ಇಂತಹ ಸಮಸ್ಯೆವನ್ನು ಎದುರಿಸಲು ಎಲ್ಲಾ ಸಾಮರ್ಥ್ಯ ಇದೆ" ಎಂದು ನಗರದ ಕೋರಮಂಗಲದ ಈಜಿಪುರ ಫ್ಲೈ ಓವರ್ ವೀಕ್ಷಣೆ ವೇಳೆ ಹೇಳಿಕೆ ನೀಡಿದರು.

Edited By :
PublicNext

PublicNext

10/09/2022 09:44 am

Cinque Terre

34.49 K

Cinque Terre

0

ಸಂಬಂಧಿತ ಸುದ್ದಿ