ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೆಮ್ಮಿಗೆಪುರ ವಾರ್ಡ್ ಗೆ ಮಳೆಯಲ್ಲೇ ಭೇಟಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್..!

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನ ಬಾಲಾಜಿ ಬಡವಾಣೆಯ ಜನ ಒಳ ಚರಂಡಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನಲೆ 10 ವರ್ಷದಿಂದ ಇಲ್ಲಿಯ ರಸ್ತೆ, ಚರಂಡಿ ಸ್ಥಿತಿ ಹೀಗೆ ಇದೆ. ಇದರ ಹಿನ್ನಲೆ ವಾರ್ಡ್ ಗೆ ಮಳೆಯಲ್ಲೆ ಸಚಿವರು ಭೇಟಿ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಾರ್ಡ್ ಜನ ಸುಮಾರು ವರ್ಷದಿಂದ ಈ ರಸ್ತೆಯಿಂದ ಕಷ್ಟ ಪಡುತ್ತಿದ್ದಾರೆ. ಮಕ್ಕಳು ಶಾಲೆಯಿಂದ ಬರೋದಕ್ಕೆ ಆಗುತ್ತಿಲ್ಲ. ಇನ್ನು ಒಳಚರಂಡಿಯ ನೀರು ಮನೆಗೆ ನುಗ್ಗುತ್ತಿದೆ. ಇದರಿಂದ ಸ್ಥಳೀಯರು ಮನೆ ಬಿಡುವ ಪರಿಸ್ಥಿತಿ ಇದೆ. ಇದಕ್ಕೆ ಕೂಡಲೆ, ಕ್ರಮ ಜರುಗಿಸಿ ಶಾಶ್ವತ ಪರಿಹಾರ ಮಾಡಬೇಕು ಎಂದು ಅಧಿಕಾರಿಗಳ ಮೇಲೆ ಸಚಿವ ಎಸ್. ಟಿ ಸೋಮಶೇಖರ್ ಗರಂ ಆಗಿದ್ದಾರೆ.

ಇನ್ನೂ ಹೆಮ್ಮಿಗೆಪುರ ವಾರ್ಡ್ ಮಾಜಿ ಕಾರ್ಪೊರೇಟರ ಆರ್ಯ ಶ್ರೀನಿವಾಸ್ ಕೂಡ ವಾರ್ಡ್ ವಿಸಿಟ್ ಮಾಡಿದ್ರು. ಈ ಕಾಲುವೆಯ ಸಮಸ್ಯೆಯನ್ನು ಆಲಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ರಾಜಕಾಲುವೆಯ ಜಾಗದಲ್ಲಿ Bwssb ಯ ದೊಡ್ಡದಾದ ಪೈಪ್ ಲೈನ್ ಹೋಗಿದೆ. ಹಾಗಾಗಿ ಇಲ್ಲಿ ಯಾವ ಕೆಲಸ ಮಾಡೋದಕ್ಕೂ ಹಿಂಜರಿಯುವ ಹಾಗಾಗಿದೆ ಎಂದರು.

ಇನ್ನು ಒಳ ಚರಂಡಿಯ ನೀರು ಮನೆ ನುಗ್ಗದಂತೆ ಏನು ಮಾಡಬೇಕು ಎಂಬುದರ ಬಗ್ಗೆ ಶಾಶ್ವತ ಪರಿಹಾರ ಮಾಡಬೇಕು ಎಂದು BWSSB, ಬಿಬಿಎಂಪಿ, ವಾರ್ಡ್ ಅಧ್ಯಕ್ಷರು, ಮಾಜಿ ಕಾರ್ಪೊರೇಟರ್, ಸಚಿವ ಎಸ್.ಟಿ ಸೋಮಶೇಖರ್ ರವರು ಅಧಿಕಾರಿಗಳ ಜೊತೆ ಚರ್ಚಿಸಿದ್ರು.

ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Manjunath H D
Kshetra Samachara

Kshetra Samachara

26/08/2022 10:04 pm

Cinque Terre

3.72 K

Cinque Terre

0

ಸಂಬಂಧಿತ ಸುದ್ದಿ