ಬೆಂಗಳೂರು: ಹೌದು... ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಇದೇ ತಿಂಗಳು ಪ್ರಧಾನಿ ವಿಸಿಟ್ ಮಾಡಿದ್ರು. ಈ ಹಿನ್ನೆಲೆ ಅವರು ಹೋಗಿ-ಬಂದ ರಸ್ತೆಗಳಿಗೆಲ್ಲ ಕಳಪೆ ಕಾಮಗಾರಿ ಮಾಡಿರೋದು ಈಗಾಗ್ಲೇ ಕಂಡು ಬಂದಿದೆ. ಅಂದ್ರೆ, ಅಕ್ಕಪಕ್ಕದ ರಸ್ತೆಗಳಿಗೆ ತೇಪೆ ಕಾಮಗಾರಿ ಮಾಡಿ ಮರೆಮಾಚಿದ್ದಾರೆ.
ನಗರದ ಕೊಮ್ಮಗಟ್ಟ- ಕೆಂಗೇರಿ ಉಪನಗರ ರಸ್ತೆಯಲ್ಲಿ ಸಾರ್ವಜನಿಕರು "ನಮ್ಮ ರಸ್ತೆಯಲ್ಲಿ ಯಾಕ್ರೀ ಟಾರ್ ಹಾಕಿಲ್ಲ" ಅಂತ ಎಲ್ಲಿ ಪ್ರಶ್ನೆ ಕೇಳ್ತಾರೋ ಎಂದು ಅಲ್ಲಲ್ಲಿ ತೇಪೆ ಕಾಮಗಾರಿ ಮಾಡಿ ಹೋಗಿದ್ದಾರೆ. ಇನ್ನು, ರಸ್ತೆ ಮಧ್ಯೆ ಗುಂಡಿಗಳಿಗೆ ಹಾಕಿರುವ ಟಾರ್ ಒಂದು ಕಡೆಯಾದ್ರೆ, ಮತ್ತೊಂದು ಕಡೆ ವಾರದಲ್ಲೇ ಕಿತ್ತೋಗಿರುವ ಚಿತ್ರಣ ಕಾಣುತ್ತಿದೆ. ಮತ್ತೊಂದೆಡೆ ಆಕ್ರೋಶಗೊಂಡು ಆ ಟಾರ್ ಕಿತ್ತು ತೋರಿಸುತ್ತಿರುವ ಸ್ಥಳೀಯರು. ಇದೆಲ್ಲವೂ ಕೆಂಗೇರಿ ಸುತ್ತಮುತ್ತ ನಡಿತಿರೋ ದೃಶ್ಯಾವಳಿ.
ಕೆಂಗೇರಿ ಉಪನಗರದ ಹಳ್ಳ ಬಿದ್ದಿರೋ ರಸ್ತೆ ಗುಂಡಿಗಳಿಗೆ ಬೇಕಾಬಿಟ್ಟಿ ಟಾರ್ ಹಾಕಿ ಹೋಗಿದ್ದಾರೆ. ಪೂರ್ತಿ ಹಾಕ್ರಪ್ಪ ಅಂದ್ರೆ... "ನಮಗೆ ಮೇಲಿಂದ ಆರ್ಡರ್ ಬಂದಿರೋದು ಇಷ್ಟಕ್ಕೆ ಮಾತ್ರ. ನಾವು ಪೂರ್ತಿ ಹಾಕೋದಕ್ಕೆ ಆಗಲ್ಲ" ಎಂದೇಳಿ ರಸ್ತೆಗಳನ್ನು ಈ ದುಸ್ಥಿತಿಗೆ ತಂದಿಟ್ಟಿದ್ದಾರೆ.
- ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
24/06/2022 10:43 pm