ವರದಿ- ಬಲರಾಮ್. ವಿ
ಬೆಂಗಳೂರು: ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಕೆಆರ್ ಪುರ ಕ್ಷೇತ್ರದ ಹೊರಮಾವು ವಾರ್ಡ್‌ನ ಸಾಯಿ ಬಡಾವಣೆಯ ನೂರಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ನಿವಾಸಿಗಳು ನೀರು ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ.
ಹೊರಮಾವು ರೈಲ್ವೆ ಕೇಳಸೇತುವೆಯ ಕೆಳಗೆ ಕಿರಿದಾದ ರಾಜಕಾಲುವೆ ಇರುವುದರಿಂದ ಈ ಬಡಾವಣೆಗೆ ಪ್ರತಿ ಬಾರಿ ಮಳೆ ಬಂದಾಗಲೂ ಮಳೆ ಹಾನಿ ಉಂಟಾಗುತ್ತಿದೆ, ಮೂರು ತಿಂಗಳಿಂದ ಮೂರು ಬಾರಿ ಮಳೆ ಹಾನಿ ಉಂಟಾಗಿದ್ದು ನಿವಾಸಿಗಳು ತತ್ತರಿಸಿದ್ದಾರೆ. ಮನೆಗಳಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿದ್ದು ಮನೆಯಿಂದ ನೀರು ಹೊರಹಾಕಲು ನಿವಾಸಿಗಳು ಹೈರಾಣಾಗಿದ್ದಾರೆ. ಮನೆಯಲ್ಲಿ ಮಂಡಿ ಉದ್ದಕ್ಕೂ ನೀರು ನಿಂತಿವೆ. ಇದರಿಂದ ನಿವಾಸಿಗಳು ಹೊರಗೂ ಹೋಗಲಾರದೇ ಮನೆಯೊಳಗೂ ಇರಲಾಗದೇ ಸಂಕಷ್ಟ ಸ್ಥಿತಿ ಬಂದೊದಗಿದೆ.
ಇನ್ನೂ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು ನಿನ್ನೆ ರಾತ್ರಿಯಿಂದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೂ, ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಮಾಡಲು ಕಾಮಗಾರಿ ಶುರು ಮಾಡುತ್ತೆವೆ ಎಂದರು. ರೈಲ್ವೆ ವೇಂಟ್ ಅನ್ನು ಹೆಚ್ಚು ಮಾಡಲು ಮುಖ್ಯಮಂತ್ರಿಗಳು 17.5 ಕೋಟಿ ಅನುದಾನ ನೀಡಿದ್ದು, ಈ ವಿಚಾರವಾಗಿ ವರ್ಕ್ ಆರ್ಡರ್ ಪಡೆದುಕೊಂಡು ಸ್ಥಳಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.
ಮುಂದಿನ ಮಳೆಗಾಲದ ವೇಳೆಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಸಚಿವರ ಬೆಂಬಲಿಗರು ಬಿಬಿಎಂಪಿ ಅಧಿಕಾರಿಗಳ ಸಹಯೋಗದೊಂದಿಗೆ ಸಾಯಿ ಲೇಔಟ್‌ನಲ್ಲಿ ಇರುವ ಸ್ಥಳೀಯರಿಗೆ ತಿಂಡಿ ನೀರು ಹಾಲು ವಿತರಣೆ ಮಾಡಿದರು.
Kshetra Samachara
03/08/2022 05:08 pm