ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರೋ ಮಳೆಗೆ ಸೃಷ್ಟಿಯಾಗಿರೋ ಅವಾಂತರ ಒಂದೆರಡಲ್ಲ. ಮಳೆ ಸಮಯದಲ್ಲಿ ವಿದ್ಯುತ್ ಕಂಬ ಟಚ್ ಮಾಡಿದಕ್ಕೆ ಕರೆಂಟ್ ಶಾಕ್ ಹೊಡೆದು ಯುವತಿ ಸಾವನ್ನಪ್ಪಿದ್ದಾಳೆ.
ಘಟನೆ ನಿನ್ನೆ ರಾತ್ರಿ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದಿದೆ. 23 ವರ್ಷದ ಅಖಿಲ ಸಾವನ್ನಪ್ಪಿದ್ದ ದುದೈರ್ವಿಯಾಗಿದ್ದು, ನಿನ್ನೆ ರಾತ್ರಿ 9.30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ.
ಮಾರತ್ ಹಳ್ಳಿ ಹಾಗೂ ವರ್ತೂರು ಮಧ್ಯಭಾಗದಲ್ಲಿರುವ ಸಿದ್ದಾಪುರದ ಮನೆಯೊಂದರಲ್ಲಿ ತಂದೆ-ತಾಯಿ ಜೊತೆ ವಾಸವಾಗಿದ್ದ ಅಖಿಲ ಬಿಕಾಂ ಪದವೀದರೆಯಾಗಿದ್ದಳು. ಖಾಸಗಿ ಶಾಲೆಯೊಂದರಲ್ಲಿ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ನಿಮಿತ್ತ ನಿನ್ನೆ ರಾತ್ರಿ ಸ್ಕೂಟರ್ ನಲ್ಲಿ ಮನೆಗೆ ಹೋಗುವಾಗ ಧಾರಾಕಾರ ಮಳೆ ಸುರಿದಿದ್ದರಿಂದ ಮಂಡಿಯುದಕ್ಕೂ ನೀರು ತುಂಬಿದೆ. ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಅಖಿಲ ಮಳೆ ನೀರಿನಲ್ಲಿ ನಿಯಂತ್ರಣ ಸಿಗದೆ ಸಹಾಯಕ್ಕಾಗಿ ಪಾದಚಾರಿ ಮಾರ್ಗದ ವಿದ್ಯುತ್ ಕಂಬಕ್ಕೆ ಟಚ್ ಮಾಡಿದ್ದಳು. ನೀರಿನಲ್ಲಿ ಬಿದ್ದಿದ್ದ ವೈಯರ್ ಮೂಲಕ ವಿದ್ಯುತ್ ಪ್ರವಹಿಸಿ ಕರೆಂಟ್ ಶಾಕ್ ಹೊಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಘಟನೆಗೆ ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಆಗದೇ ಇರೋದೇ ಸಾವಿಗೆ ಕಾರಣ ಆರೋಪಿಸಲಾಗುತ್ತಿದೆ.
ಇಷ್ಟಾದರೂ ಘಟನಾ ಸ್ಥಳಕ್ಕೆ ಬಿಬಿಎಂಪಿ,ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹ ವೈದೇಹಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
PublicNext
06/09/2022 01:16 pm