ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜ ಪೇಟೆ ಈದ್ಗಾ ಮೈದಾನ ವಿವಾದ- ಶಾಸಕ ಜಮೀರ್ ಬಿಬಿಎಂಪಿ ಕಚೇರಿಗೆ ಧಿಡೀರ್ ಭೇಟಿ

ಬೆಂಗಳೂರು- ಚಾಮರಾಜ ಪೇಟೆ ಈದ್ಗಾ ಮೈದಾನ ವಿವಾದ ಕೇಸ್‌ನಲ್ಲಿ ಕಾಂಗ್ರೆಸ್ ಹಾಗೂ ಈ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಎಂಟ್ರಿ ಕೊಟ್ಟಿದ್ದಾರೆ.

ಇಷ್ಟು ದಿನ ಹಿಂದೂ ಸಂಘಟನೆ, ವಕ್ಫ್ ಬೋರ್ಡ್, ಬಿಬಿಎಂಪಿ ನಡುವಿನ ವಾದ- ಪ್ರತಿವಾದಗಳು ನಡೆ ಯುತ್ತಿದೆ. ತಮ್ಮ ಆಸ್ತಿ ಎಂದು ಹೇಳ್ತಿರುವ ವಕ್ಫ್ ಬೋರ್ಡ್ ದಾಖಲೆ ಸಲ್ಲಿಸುವಂತೆ ಬಿಬಿಎಂಪಿ ನೋಟಿಸ್ ನೀಡಿತ್ತು. ಮೂರು ದಿನದೊಳಗೆ ದಾಖಲೆ ಸಲ್ಲಿಸುವಂತೆ ಪಾಲಿಕೆ ನೀಡಿದ್ದ ಗಡುವು ಇಂದಿಗೆ ಕೊನೆ ಆಗಿದೆ.

ಆ ಹಿನ್ನೆಲೆಯಲ್ಲಿ ಇಂದು ಬಿಬಿಎಂಪಿ ಕೇಂದ್ರ ಕಚೇರಿಗೆ ಬಂದ ಚಾಮರಾಜ ಪೇಟೆ ಶಾಸಕರು ಆದ ಜಮೀರ್ ಅಹ್ಮದ್ ಖಾನ್ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಜತೆ ಕೆಲ ಸಮಯ ಮಾತುಕತೆ ನಡೆಸಿದರು.

ಈ ಮಾತುಕತೆ ಮಹತ್ವ ಪಡೆದು ಕೊಂಡಿದ್ದು, ಮುಂದಿನ ಸೋಮವಾರ ಪ್ರೆಸ್ ಮೀಟ್ ನಡೆಸುವುದಾಗಿ ಚರ್ಚೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

Edited By : Somashekar
Kshetra Samachara

Kshetra Samachara

17/06/2022 08:49 pm

Cinque Terre

3.66 K

Cinque Terre

0

ಸಂಬಂಧಿತ ಸುದ್ದಿ