ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೆಸ್ಟ್ ಆಫ್ ಕಾರ್ಡ್ ರಸ್ತೆ ಬಿಡಿಎ ಮೇಲು ಸೇತುವೆ ಅಂಡರ್ ಪಾಸ್ ಒಂದು ಭಾಗ ಬಂದ್

ವರದಿ: ಗಣೇಶ್ ಹೆಗಡೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಾಜಿ ನಗರದ ವೆಸ್ಟ್ ಆಪ್ ಕಾರ್ಡ್ ಮೇಲು ಸೇತುವೆ ಅಂಡರ್ ಪಾಸ್ ಬಂದ್ ಆಗಿ ಎರಡು ವರ್ಷ ಕಳೆದಿವೆ.

ಹೌದು. ವಸತಿ ಸಚಿವ ವಿ. ಸೋಮಣ್ಣ ಅವರು ಬಿಬಿಎಂಪಿ ಅಧಿಕಾರಿಗಳ ಜತೆ ನಿನ್ನೆಯಷ್ಟೇ ಮೇಲು ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಆದರೆ ಕಾಮಗಾರಿ ನಿಮಿತ್ತ ಚೆನ್ನಾಗಿರುವ ರಸ್ತೆಯನ್ನು ಪಾಲಿಕೆ ಬಂದ ಮಾಡಿದೆ.

ವಿಜಯನಗರದಿಂದ ರಾಜಾಜಿ ನಗರಕ್ಕೆ ಸಂಪರ್ಕ ಕಲ್ಪಿಸುವ ವೆಸ್ಟ್ ಆಪ್ ಕಾರ್ಡ್‌ ರೋಡ್ ಬಿಡಿಎ ನಿರ್ಮಿತ ಮೇಲು ಸೇತುವೆಯ ಅಂಡರ್ ಪಾಸ್ ಒಂದು ಭಾಗ ಮಾತ್ರ ಇನ್ನೂ ಓಪನ್ ಆಗಿಲ್ಲ. ಕಳೆದ ಎರಡು ವರ್ಷಗಳಿಂದ ಬಂದ ಮಾಡಲಾಗಿದ್ದು, ಅಲ್ಲಿ ಮೇಲು ಸೇತುವೆ ಕಾಮಗಾರಿ ಸಾಮಗ್ರಿಗಳು, ಡಬರೀಸ್‌ಗಳನ್ನು ಸುರಿಯಲಾಗಿದೆ. ಫ್ಲೈಓವರ್ ಕಾಮಗಾರಿ ಪೂರ್ಣಗೊಂಡ ಬಳಿಕ ಈ ರಸ್ತೆ ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಾಧ್ಯತೆ ಇದೆ.

Edited By :
PublicNext

PublicNext

24/06/2022 10:27 pm

Cinque Terre

41.74 K

Cinque Terre

1

ಸಂಬಂಧಿತ ಸುದ್ದಿ